Tuesday, April 16, 2024
spot_imgspot_img
spot_imgspot_img

ಮಂಗಳೂರು ನಗರಕ್ಕೆ 35 ಮಂದಿಯ ಸಶಸ್ತ್ರ ಭಯೋತ್ಪಾದನಾ ನಿಗ್ರಹ ದಳ

- Advertisement -G L Acharya panikkar
- Advertisement -

ಮಂಗಳೂರು ನಗರದಲ್ಲಿ ಭಯೋತ್ಪಾದನಾ ನಿಗ್ರಹ ದಳ ಎನ್ನುವ ಹೊಸ ಘಟಕವನ್ನು ಅಸ್ಥಿತ್ವಕ್ಕೆ ತರಲಾಗಿದ್ದಯ ಆಂತರಿಕ ಭದ್ರತಾ ವಿಭಾಗದ ಅಡಿಯಲ್ಲಿ ಕಾರ್ಯ ನೊರ್ವಹಿಸಲಿದೆ. ನಗರ ಸಶಸ್ತ್ರ ಮೀಸಲು ಪಡೆಯಿಂದ ಆಯ್ದ 35 ಪೊಲೀಸ್ ಸಿಬ್ಬಂದಿಯನ್ನು ಹೊಂದಿದೆ. ಈ ಸಿಬ್ಬಂದಿಗಳನ್ನು ವಿಶೇಷ ತರಬೇತುಗೊಳಿಸಿ ಭಯೋತ್ಪಾದಕ ವಿರೋಧಿ ದಳವನ್ನು ಹೊಸದಾಗಿ ರಚಿಸಲಾಗಿದೆ.

ಈ ತಂಡದಲ್ಲಿ 35 ಪೊಲೀಸ್ ಸಿಬ್ಬಂದಿಯನ್ನು ಹೊಂದಿದೆ. ಬೆಂಗಳೂರಿನ ಕೂಡ್ಲುವಿನಲ್ಲಿರುವ ಭಯೋತ್ಪಾದನೆ ನಿಗ್ರಹ ಕೇಂದ್ರದಲ್ಲಿ (ಸಿಸಿಟಿ) ತಂಡ ಎರಡು ತಿಂಗಳ ತರಬೇತಿ ಪಡೆದು ನಗರಕ್ಕೆ ಆಗಮಿಸಿದೆ. ನಗರ ಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆಯಾದಲ್ಲಿ ಹೇಗೆ ಎದುರಿಸಬೇಕು. ಜನರ ಮಧ್ಯೆ ಕಾರ್ಯ ನಿರ್ವಹಿಸುವುದು ಹೇಗೆ ಎನ್ನುವ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್, ತಂಡದ ನಾಯಕ ಸುಬ್ರಹ್ಮಣ್ಯ ಎಂ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತಂಡದ ಸದಸ್ಯರು ಗೌರವ ರಕ್ಷೆ ನೀಡಿದರು.

ಸಿಬ್ಬಂದಿಯನ್ನು ತಲಾ 15 ಸದಸ್ಯರ ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಐದು ಹೆಚ್ಚುವರಿ ಸಿಬ್ಬಂದಿ ಎಲೆಗಳನ್ನು ಕವರ್ ಮಾಡುತ್ತಾರೆ. ತಂಡವು ಪ್ರತ್ಯೇಕ ಸಮವಸ್ತ್ರವನ್ನು ಹೊಂದಿರುತ್ತದೆ ಎಂದು ಮಂಗಳೂರು ನಗರ ಭಯೋತ್ಪಾದನಾ ನಿಗ್ರಹ ತಂಡದ ಮುಖ್ಯಸ್ಥ ಸುಬ್ರಹ್ಮಣ್ಯ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!