Monday, May 20, 2024
spot_imgspot_img
spot_imgspot_img

ಮಂಗಳೂರು: ನಟಿಯೋರ್ವಳ ತಾಯಿಯಿಂದ ಸಾವಿರಾರು ರೂ.ವಸೂಲಿ ಮಾಡಿದ ನಕಲಿ ಪೊಲೀಸ್‌..!!

- Advertisement -G L Acharya panikkar
- Advertisement -

ಮಂಗಳೂರು: ಪೊಲೀಸ್ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ನಟಿಯೊಬ್ಬರ ತಾಯಿ ಬಳಿಯಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಸಾಜ್ ಪಾರ್ಲರ್ ಇಟ್ಟುಕೊಂಡಿದ್ದ ನಟಿಯ ತಾಯಿ ಅಂಗಡಿ ಮುಚ್ಚಿ ಮನೆಯಲ್ಲೇ ನೆಲೆಸಿದ್ದಾರೆ. ಇವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಜ್ ದೇವಾಡಿಗ ಎಂದು ಹೇಳಿಕೊಂಡಿದ್ದಾನೆ. ನೀವು ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ. ದಂಧೆ ನಡೆಸುತ್ತಿರುವುದು ಸಾಹೇಬರಿಗೆ ಗೊತ್ತಾಗಿದೆ. ಸಾಹೇಬರ ಜತೆ ಸಹಕರಿಸಿದರೆ ದಂಧೆಗೆ ತೊಂದರೆ ಆಗುವುದಿಲ್ಲ. ಗೂಗಲ್‌ ಪೇ ಮಾಡಿದರೆ ರೈಡ್‌ ಮಾಡುವುದಿಲ್ಲ” ಎಂದು ಬೆದರಿಕೆ ಹಾಕಿ ಹೋಗಿದ್ದ.

ಆ ಬಳಿಕ ಕರೆ ಮಾಡಿದ ವ್ಯಕ್ತಿ “ನಿಮ್ಮ ಮನೆಯಲ್ಲಿ ಚಿನ್ನಾಭರಣ, ಹಣ ಇದೆ ಎಂದು ದೂರು ಬಂದಿದೆ. ಪ್ರಕರಣ ಮುಚ್ಚಿಹಾಕಲು ಹಣ ಕೊಡಬೇಕು ಇಲ್ಲವಾದರೆ ಪೊಲೀಸರು ರೈಡ್ ಮಾಡುತ್ತಾರೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಮಹಿಳೆ ಹತ್ತಿರದ ಮೊಬೈಲ್ ಶಾಪ್​ಗೆ ಹೋಗಿ ಗೂಗಲ್ ಪೇ ಮೂಲಕ 18 ಸಾವಿರ ರೂಪಾಯಿ ವರ್ಗಾಯಿಸಿದ್ದಾರೆ.

ಮರುದಿನ ಮತ್ತೆ ಕರೆ ಮಾಡಿದ ಅದೇ ವ್ಯಕ್ತಿ, ಫೈಲ್ ಪೊಲೀಸ್ ಆಯುಕ್ತರ ಕಚೇರಿಗೂ ಹೋಗಿದೆ, ಪ್ರಕರಣವನ್ನು ಇಲ್ಲವಾಗಿಸಲು ಸಿಬ್ಬಂದಿಗೆ ಹಣ ನೀಡಬೇಕು, ಸಿಸಿಟಿವಿ ಆಫ್ ಮಾಡಿ ಫೈಲ್ ತೆಗೆದುಕೊಳ್ಳಲೂ ಸಿಬ್ಬಂದಿಗೆ ಹಣ ನೀಡಬೇಕು. ಇಲ್ಲವಾದರೆ ಆಯುಕ್ತರು ಮೀಡಿಯಾ ಸಹಿತವಾಗಿ ಮನೆಗೆ ಬರುತ್ತಾರೆ ಎಂದು ಬೆದರಿಕೆ ಹಾಕುತ್ತಾನೆ. ಹೆದರಿಕೊಂಡ ಮಹಿಳೆ ಮತ್ತದೇ ಮೊಬೈಲ್ ಶಾಪ್​ಗೆ ಹೋಗಿ 20 ಸಾವಿರ ರೂಪಾಯಿಯನ್ನು ಅದೇ ನಂಬರ್​ಗೆ ಗೂಗಲ್ ಪೇ ಮಾಡಿದ್ದಾರೆ. ಹೀಗೆ ಒಟ್ಟು 38 ಸಾವಿರ ರೂಪಾಯಿ ಹಣವನ್ನು ಕಳುಹಿಸಿದ್ದಾರೆ.

ನನಗೊಂದು ಕುಟುಂಬ ಇದೆ. ನಾನೇನು ತಪ್ಪು ಮಾಡದಿದ್ದರೂ ಬೆದರಿಕೆ ಹಾಕಿದಾಗ ಏನೂ ಮಾಡಲಾಗಲಿಲ್ಲ. ಎರಡು ಪೊಲೀಸ್ ಠಾಣೆಯಲ್ಲಿನ ಪರಿಚಯಸ್ಥರಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪೊಲೀಸ್ ಸಮವಸ್ತ್ರದಲ್ಲಿ ಗೇಟ್ ಮುಂದೆ ಬಂದ ವ್ಯಕ್ತಿ ಅರ್ಧ ಗಂಟೆಯೊಳಗೆ ಹಣ ಹಾಕಬೇಕು, ಇಲ್ಲದಿದ್ದರೆ ಸಾಹೇಬ್ರು ಇಲ್ಲೇ ಹತ್ತಿರದಲ್ಲಿದ್ದಾರೆ, ಈಗಲೇ ಕರೆ ಮಾಡುತ್ತೇನೆ ಎಂದೆಲ್ಲಾ ಹೇಳಿ ಬೆದರಿಸಿದ್ದಾನೆ. ಇದರಿಂದ ಹೆದರಿದ ನಾನು ಹಣ ವರ್ಗಾಯಿಸಿದ್ದೇನೆ ಎಂದು ಮಹಿಳೆ ಮಾಹಿತಿ ಹಂಚಿಕೊಂಡಿದ್ದಾರೆ. ಬಂದವನು ಪೊಲೀಸ್ ಹೌದಾ ಅಲ್ಲವೊ ಅನ್ನೋದು ಇನ್ನು ಗೊತ್ತಾಗಿಲ್ಲ. ಆದರೆ ಬಂದವನು ಪೊಲೀಸ್ ಹಾಗೆ ಇದ್ದ. ಖಾಕಿ ಪ್ಯಾಂಟ್, ಡ್ರೆಸ್ ಹಾಗೂ ವಾಕಿಟಾಕಿ ಇತ್ತು, ವಾಕಿಟಾಕಿಯಲ್ಲಿ ಮಾತನಾಡುವುದು ಕೂಡ ಕೇಳಿಸುತ್ತಿತ್ತು ಎಂದು ಮಹಿಳೆ ಹೇಳಿದ್ದಾರೆ.

- Advertisement -

Related news

error: Content is protected !!