Friday, April 26, 2024
spot_imgspot_img
spot_imgspot_img

ಮಂಗಳೂರು: ನಾಗೇಂದ್ರ – ನಾಗಿಣಿಗೆ 31 ಮರಿಗಳ ಜನನ..! ವಿಶ್ವದಲ್ಲೇ ಅಸಾಧ್ಯ ಎಂದು ಪರಿಗಣಿಸಲಾಗಿದ್ದನ್ನು ಮಾಡಿ ತೋರಿಸಿದ ಹೆಗ್ಗಳಿಕೆ..!

- Advertisement -G L Acharya panikkar
- Advertisement -

2010-11 ರಲ್ಲಿ ವಿಶ್ವದಲ್ಲೇ ಅಸಾಧ್ಯ ಎಂದು ಪರಿಗಣಿಸಲಾಗಿದ್ದ ಸಂರಕ್ಷಿತ ಪರಿಸರದಲ್ಲಿನ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಮಾಡಿದ ದಾಖಲೆ ಪಿಲಿಕುಳ ಉದ್ಯಾನಕ್ಕಿದೆ. ಪ್ರಥಮ ಬಾರಿಗೆ ಸಂರಕ್ಷಿತ ಪರಿಸರದಲ್ಲಿ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಮಾಡಿ ಪ್ರಥಮಕ್ಕೆ ಸಾಕ್ಷಿಯಾಗಿತ್ತು. ಈಗ ಮತ್ತೆ ಜೈವಿಕ ಉದ್ಯಾನದಲ್ಲಿ ಕೃತಕ ಕಾವು ಪಡೆದು ಕಾಳಿಂಗ ಸರ್ಪದ ಮರಿಗಳು ಜನಿಸಿವೆ.

ಪಿಲಿಕುಳ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಕೃತಕ ಕಾವು ಪಡೆದು 38 ಕಾಳಿಂಗ ಸರ್ಪದ ಮರಿಗಳು ಜನಿಸಿವೆ. ಸುಳ್ಯದ ಸಂಪಾಜೆ ಪರಿಸರದಲ್ಲಿ ಸೆರೆ ಹಿಡಿದು ತಂದಿದ್ದ ಎಂಟು ವರ್ಷದ ನಾಗಿಣಿ ಎಂಬ ಹೆಸರಿನ ಕಾಳಿಂಗ ಸರ್ಪ ಹಾಗೂ ಪಿಲಿಕುಳದಲ್ಲೇ ಹುಟ್ಟಿದ್ದ 10 ವರ್ಷದ ನಾಗೇಂದ್ರ ಸರ್ಪದ ಮೊಟ್ಟೆಗಳು ಇವು . ಇಲ್ಲಿನ ಸಂತಾನೋತ್ಪತ್ತಿ ಕೇಂದ್ರದಲ್ಲಿ ನಾಗಿಣಿ 38 ಮೊಟ್ಟೆ ಇಟ್ಟಿದ್ದು, ಆ ಮೊಟ್ಟೆಗಳನ್ನು ಇನ್ಕ್ಯುಬೇಟರ್‌ನಲ್ಲಿಟ್ಟು 76 ದಿನಗಳ ನಂತರ 31 ಮರಿಗಳು ಮೊಟ್ಟೆಯಿಂದ ಹೊರ ಬಂದಿವೆ. ಅವುಗಳು ಸುಮಾರು ಒಂದೂವರೆ ಅಡಿ ಉದ್ದವಿದೆ.

ಸಂತಾನೋತ್ಪತ್ತಿ ಕೇಂದ್ರದಲ್ಲಿ ಮೊಟ್ಟೆಗೆ ಕಾವು ನೀಡಲು ಅವಕಾಶ ನೀಡುವುದಿಲ್ಲ. ಅವುಗಳನ್ನು ಬೇರ್ಪಡಿಸಿ ಕೃತಕ ಕಾವು ನೀಡಿ ಮರಿ ಮಾಡಲಾಗುತ್ತದೆ. ಮುಖ್ಯವಾಗಿ ಮರಿಗಳು ಹೊರಬಂದ ಕೂಡಲೇ ಅವುಗಳನ್ನು ತಾಯಿ ತಿನ್ನುವ ಆತಂಕ ಇರುತ್ತದೆ . ಕಾಡಿನಲ್ಲಾದರೆ ಮೊಟ್ಟೆಗೆ ಕಾವು ನೀಡಿದ ಮರಿಗಳು ಹೊರಬರಲು ಶುರು ಆದಾಗ ಅದನ್ನು ಬಿಟ್ಟು ಹೋಗುತ್ತದೆ.

100 ಕಾಳಿಂಗ ಸರ್ಪದ ಮರಿಗಳನ್ನು ಕೃತಕ ಕಾವು ಮೂಲಕ ಮರಿ ಮಾಡಲಾಗಿತ್ತು. ಮೂರು ಹಾವುಗಳು ನೂರು ಮೊಟ್ಟೆ ಇಟ್ಟಿದ್ದವು. ಈ ಪೈಕಿ 35 ಮರಿಗಳನ್ನು ಪ್ರಾಣಿಗಳ ವಿನಿಮಯ ಯೋಜನೆಯಡಿ ದೇಶದಾದ್ಯಂತ ವಿವಿಧ ಮೃಗಾಲಯಗಳಿಗೆ ಕಳುಹಿಸಲಾಗಿತ್ತು. ಉಳಿದ 65ನ್ನು ಕಾಡಿಗೆ ಬಿಡಲಾಗಿತ್ತು. ಈ ವರ್ಷ ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರವು ಪಿಲಿಕುಳ ಮೃಗಾಲಯಕ್ಕೆ ಕಾಳಿಂಗ ಸರ್ಪ ಮತ್ತು ಮಲಬಾರ್ ಕೆಂಚಳಿಲಿನ ಸಂತಾನೋತ್ಪತ್ತಿ ಯೋಜನೆ ನೀಡಿತ್ತು. ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಈಗ 14 ಕಾಳಿಂಗ ಸರ್ಪಗಳಿವೆ. ಅವುಗಳ ಪೈಕಿ ಒಂಬತ್ತು ಗಂಡು ಹಾಗೂ ಐದು ಹೆಣ್ಣು ಸರ್ಪಗಳಿವೆ ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

- Advertisement -

Related news

error: Content is protected !!