Monday, May 6, 2024
spot_imgspot_img
spot_imgspot_img

ಮಂಗಳೂರು: ಅಪರೂಪದ ನಾಗಸಾಧು ಬೋಳೂರು ಚಿತಾಗಾರಕ್ಕೆ ಆಗಮಿಸಿ ವಿಭೂತಿ ಧಾರಣೆ .!!

- Advertisement -G L Acharya panikkar
- Advertisement -

ಮಂಗಳೂರು: ಜನಸಾಮಾನ್ಯರ ಕಣ್ಣಿಗೆ ಅಪರೂಪವಾಗಿ ಕಾಣಸಿಗುವ ನಾಗ ಸಾಧುವೊಬ್ಬರು ಮಂಗಳೂರು ನಗರದ ಬೋಳುರು ಚಿತಾಗಾರದಲ್ಲಿ ಕಾಣಿಸಿಕೊಂಡಿದ್ದು, ಚಿತಾಗಾರಕ್ಕೆ ಆಗಮಿಸಿ ವಿಭೂತಿ ಧಾರಣೆ ಮಾಡಿ ಬಳಿಕ ತೆರಳಿದ್ದಾರೆ.

ಅಪರೂಪದ ನಾಗ ಸಾಧುವನ್ನು ನೋಡಲು ಅನೇಕರು ಬೋಳೂರು ಚಿತಾಗಾರಕ್ಕೆ ಬಂದಿದ್ದರೂ. ಹತ್ತಿರ ಹೋಗಲು ಯಾರು ಧೈರ್ಯ ಮಾಡಿರಲಿಲ್ಲ. ವಿಭೂತಿ ಧಾರಣೆಯ ಬಳಿಕ ನಾಗಸಾಧು ತಮ್ಮದೇ ಶೈಲಿಯಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ತರಳಿದ್ದಾರೆ ಎನ್ನಲಾಗಿದೆ.

ನಾಗಾ ಎಂದರೆ ‘ಬೆತ್ತಲೆ’ ಎಂದರ್ಥ. ನಾಗಾ ಸಾಧುಗಳು ಜೀವನ ಪರ್ಯಂತ ಬೆತ್ತಲೆಯಾಗಿಯೇ ಇರುತ್ತಾರೆ ಮತ್ತು ಅವರು ತಮ್ಮನ್ನು ದೇವರ ಸಂದೇಶವಾಹಕರೆಂದು ಪರಿಗಣಿಸುತ್ತಾರೆ. ನಾಗ ಸಾಧುಗಳು ಪ್ರಕೃತಿ ಮತ್ತು ನೈಸರ್ಗಿಕ ಸ್ಥಿತಿಗೆ ಪ್ರಾಮುಖ್ಯತೆ ನೀಡುತ್ತಾರೆ. ನಾಗ ಸಾಧುಗಳು ವರ್ಷವಿಡೀ ತಪಸ್ಸು ಮಾಡಿ ಕಾಡು, ಗುಹೆ, ಪರ್ವತಗಳಿಗೆ ಹೋಗಿ ದೇವರ ಧ್ಯಾನ ಮಾಡುತ್ತಾರೆ ಎಂದು ಹೇಳಲಾಗುತ್ತದೆ.

ನಾಗಾ ಸಾಧುಗಳ ಬದುಕೆಂದರೆ ಕಠಿಣ ವ್ರತಗಳ ಸರಮಾಲೆ. ಮುಳ್ಳಿನ ಮೇಲಿನ ನಡಿಗೆ. ಆದರೆ ಕುಂಭಮೇಳದಲ್ಲಿ ಇವರೇ ಎಲ್ಲರ ಆಕರ್ಷಣೆಯ ಪ್ರಧಾನ ಬಿಂದು. ದಿನದ ಬಹುಪಾಲು ಒಂಟಿಕಾಲಿನಲ್ಲಿ ನಿಂತಿರುವವರು, ಎಷ್ಟೋ ವರ್ಷಗಳಿಂದ ಒಂದು ಕೈ ಮೇಲೆತ್ತಿ ಹಿಡಿದ ದೀಕ್ಷಿತರು, ಬೇಯಿಸದ ಆಹಾರವನ್ನೂ ಮಾತ್ರ ಜೀವನಪೂರ್ತಿ ತಿನ್ನುವ ವ್ರತಿಗಳು, ದಿನಕ್ಕೊಂದು ಹೊತ್ತು ಮಾತ್ರ ಒಂದು ಮುಷ್ಟಿ ಆಹಾರ ಸೇವಿಸುವವರು, ನೀರು ಕುಡಿದೇ ಬದುಕಿರುವವರು.

ತಮ್ಮ ಧರ್ಮ ಹಾಗೂ ದೇಶದ ರಕ್ಷಣೆಗಾಗಿ ಕಾಳಗಕ್ಕಿಳಿಯಲು ಸದಾ ಸಿದ್ಧರಾಗಿರುತ್ತಾರೆ. ಭರ್ಚಿ, ತ್ರಿಶೂಲಗಳನ್ನು ಅಖಾಡಗಳ ಲಾಂಛನವಾಗಿ ಇಟ್ಟುಕೊಳ್ಳುತ್ತಾರೆ. ಕುಂಭಮೇಳದಲ್ಲಿ ಶಾಹಿಸ್ನಾನಕ್ಕಿಳಿಯುವ ಮುನ್ನ ತ್ರಿಶೂಲವನ್ನು ಪೂಜಿಸಿಯೇ ಹೊರಡುತ್ತಾರೆ.

ಜಟೆಯನ್ನೂ ಉಗುರನ್ನೂ ಕತ್ತರಿಸದೆ ಅಡಿಗಟ್ಟಲೆ ದೂರಕ್ಕೆ ಬೆಳೆಸಿಕೊಂಡವರು, ಆಗಾಗ ಖಡ್ಗದಿಂದ ತಮ್ಮ ದೇಹವನ್ನೇ ನೋಯಿಸಿಕೊಂಡು ‘ಹರಹರ ಮಹಾದೇವ್‌’ ಎನ್ನುವವರು ಹೀಗೇ ಅನೇಕ ವ್ಯವಿಧ್ಯಮಯ ನಾಗ ಸಾಧುಗಳು ಭಾರತದಲ್ಲಿ ಕಾಣ ಸಿಗುತ್ತಾರೆ. ಕೈಲಾಸದ ಶಿವನ ಗಣಗಳೇ ಭೂಮಿಯಲ್ಲಿ ನಾಗಾ ಸಾಧು ಪಂಥಕ್ಕೆ ಪ್ರೇರಣೆ ಎನ್ನಲಾಗುತ್ತದೆ.

- Advertisement -

Related news

error: Content is protected !!