Thursday, June 4, 2026
spot_imgspot_img
spot_imgspot_img

ಮಂಗಳೂರು: ಪಿಲಿಕುಳದಲ್ಲಿ ಹುಲಿಗಳ ನಡುವೆ ಕಾಳಗ, ಒಂದು ಹುಲಿ ಮೃತ್ಯು

- Advertisement -
- Advertisement -

ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ಎರಡು ಹುಲಿಗಳ ನಡುವೆ ಇತ್ತೀಚೆಗೆ ಕಾಳಗ ನಡೆದಿತ್ತು. ಈ ಪೈಕಿ ಗಾಯಗೊಂಡಿದ್ದ ಒಂದು ಹುಲಿ ಸಾವನ್ನಪ್ಪಿದೆ. ಗಾಯಗೊಂಡಿದ್ದ ಹುಲಿ ಇತ್ತೀಚೆಗೆ ಚೇತರಿಕೆ ಕಂಡಿತ್ತು. ಆದರೆ ಜೂನ್‌ 7ರಂದು ಮುಂಜಾನೆ ಹೃದಯಾಘಾತದಿಂದ ಒಂದು ಹುಲಿ ಸಾವನ್ನಪ್ಪಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಮೂರು ದಿನಗಳ ಹಿಂದೆ ನಡೆದಿದ್ದ ಹುಲಿಗಳ ಗಲಾಟೆ ನಡೆದಿತ್ತು ಎಂದು ತಿಳಿಸಿದ್ದಾರೆ. ಬೇಟೆಗೆ ಬಂದ ಹುಲಿ ಕಾಳಗ ನಡೆಸಿದೆ. ಕಾಳಗದಲ್ಲಿ ಗಾಯಗೊಂಡಿದ್ದ ಒಂದು 15 ವರ್ಷ ಪ್ರಾಯದ ಹೆಣ್ಣು ಹುಲಿ ನೇತ್ರಾವತಿ ಮೃತಪಟ್ಟಿದೆ. ವೈದ್ಯರು ಹುಲಿಗೆ ಸೂಕ್ತ ಚಿಕಿತ್ಸೆ ನೀಡಿದ್ದರೂ ಜೂನ್‌ 7ರಂದು ಹುಲಿ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!