Friday, April 26, 2024
spot_imgspot_img
spot_imgspot_img

ಮಂಗಳೂರು: ಪಿಲಿಕುಳ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ; ಯಾವೆಲ್ಲಾ ಪ್ರಾಣಿ ಪಕ್ಷಿ ಸೇರ್ಪಡೆಗೊಂಡಿವೆ ಗೊತ್ತಾ?

- Advertisement -G L Acharya panikkar
- Advertisement -

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳು ಬಂದಿದ್ದಾರೆ. ದೇಶ ವಿದೇಶ ಅಪರೂಪದ ಅಳಿಲು, ಟೆಮಾರಿನ, ಮಕಾವು ಸೇರಿದಂತೆ ವಿವಿಧ ಪಕ್ಷಿಗಳು ಸೇರ್ಪಟೆಯಾಗಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಮೆರೆಗೆ ಗುಜರಾತ್‌ ಗ್ರೀನ್‌ ಝೂ ನಿಂದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಪ್ರಾಣಿ ಪಕ್ಷಿಗಳನ್ನು ತರಲಾಗಿದೆ.

ಮದ್ಯ ಮತ್ತು ದಕ್ಷಿಣ ಅಮೆರಿಕ, ಬ್ರೆಝಿಲ್, ಅರ್ಜೆಂಟೀನಾ, ಆಫ್ರಿಕಾ ಖಂಡ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಾಣಸಿಗುವ ಸಣ್ಣ ಜಾತಿಯ ಅಳಿಲು ಕಪಿ, ಮರ‍್ಮೊಸೆಟ್, ಕೆಂಪು ಕೈಯ ಟೆಮಾರಿನ, ಮಾರ ಮಾರ, ಬೃಹತ್ ಗಾತ್ರದ ನೀಲಿ ಬಂಗಾರದ ಮಕಾವು, ಮಿಲಿಟರಿ ಮಕಾವು, ಗಾಲಾ ಕೋಕಟು, ಹಸಿರು ಟೊರೆಕೊ ಮತ್ತು ವಿವಿಧ ಜಾತಿಯ ವಿದೇಶಿ ಪಕ್ಷಿಗಳನ್ನು ತರಿಸಲಾಗಿದೆ.

ಪಿಲಿಕುಳದಲ್ಲಿ ಹೆಚ್ಚುವರಿಯಾಗಿರುವ ಹುಲಿಗಳು, ಚಿರತೆಗಳು, ಕಾಡು ನಾಯಿಗಳು ಮತ್ತು ವಿವಿಧ ಜಾತಿಯ ಉರಗಗಳನ್ನು ಕೊಡಲಾಗಿದೆ.

ಹೊಸದಾಗಿ ಬಂದ ಪಾಣಿಗಳ ಆರೋಗ್ಯ ಪರಿಶೀಲಿಸಲು ಮತ್ತು ಇಲ್ಲಿಯ ವಾತಾವರಣಕ್ಕೆ ಒಗ್ಗುವ ತನಕ ನಿಗಾದಲ್ಲಿ ಇಡಲಾಗಿದೆ. ಪಕ್ಷಿಗಳು ವೀಕ್ಷಣೆಗೆ ಮುಕ್ತವಾಗಿವೆ. ಇತರ ಪ್ರಾಣಿಗಳು ನಿಗಾ ಅವಧಿ ಮುಗಿದ ಕೂಡಲೇ ಜನರ ವೀಕ್ಷಣೆಗೆ ಇಡಲಾಗುವುದು ಎಂದು ತಿಳಿಸಲಾಗಿದೆ.

- Advertisement -

Related news

error: Content is protected !!