Monday, May 6, 2024
spot_imgspot_img
spot_imgspot_img

ಮಂಗಳೂರು: ಫ್ಲ್ಯಾಟ್‌ನಲ್ಲಿ ಹೈ ಪ್ರೊಫೈಲ್ ವೇಶ್ಯಾವಾಟಿಕೆ ದಂಧೆ ಪ್ರಕರಣ; ನೋಟ್’ಬುಕ್’ನಲ್ಲಿ ಗ್ರಾಹಕರ ಹೆಸರು, ನಂಬರ್ ಪತ್ತೆ..!

- Advertisement -G L Acharya panikkar
- Advertisement -

ಮಂಗಳೂರು: ಆರ್ಥಿಕ ಸಂಕಷ್ಟ ಹೊಂದಿರುವ ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ತನಿಖೆ ಆರಂಭದಲ್ಲಿ ಉಪ್ಪಳದ ಅಬೂಬಕ್ಕರ್ ಸಿದ್ದಿಕ್ (42), ನಂದಿಗುಡ್ಡೆಯ ಶಮೀನಾ (41) ಮತ್ತು ಅಡ್ವಾರ್‌ಪದವಿನ ಐಸಮ್ಮ (56) ಎಂಬವರನ್ನು ಬಂಧಿಸಲಾಗಿತ್ತು.

vtv vitla
ಆರೋಪಿ ಶಮೀನಾ

ಇದೀಗ ಗ್ರಾಹಕರಾಗಿ ಬಂದು ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿದ ಮೂಡುಬಿದಿರೆ ಹೊಸಬೆಟ್ಟಿನ ಸಂದೀಪ್(33), ಕೈಕಂಬದ ಸಿಪ್ರಿಯಾನ್ ಅಂದ್ರಾದೆ(40), ಉದ್ಯಾವರ ಮಂಜೇಶ್ವರದ ಮಹಮ್ಮದ್ ಶರೀಫ್(46), ವೇಶ್ಯಾವಾಟಿಕೆ ಜಾಲಕ್ಕೆ ಸಹಕರಿಸಿದ ತಲಪಾಡಿಯ ರಹಮತ್ (48), ಕಣ್ಣೂರಿನ ಸನಾ ಆಲಿಯಾಸ್ ಅಸ್ಮಾ (24), ಬಂಟ್ವಾಳ ನರಿಂಗಾನದ ಉಮ್ಮರ್ ಕುನ್ನಿ (43) ಮತ್ತು ಬೆಂದೂರ್‌ವೆಲ್‌ನ ಮಹಮ್ಮದ್ ಹನೀಫ್(46) ಬಂಧಿಸಿದ್ದಾರೆ ಎನ್ನಲಾಗಿದೆ.

ನಗರದ ನಂದಿಗುಡ್ಡ ಬಳಿಯ ಲಿಯಾನಾ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಜಾಲದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮತ್ತಷ್ಟು ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಗ್ರಾಹಕರು ಸಹಿತ ವೇಶ್ಯಾವಾಟಿಕೆಗೆ ಸಹಕಾರ ನೀಡಿದ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ 10 ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳ ವಿರುದ್ಧ ವಿವಿಧ ಕಲಂಗಳ ಜತೆ ಪೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಗರದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಇಬ್ಬರು ಅಪ್ರಾಪ್ತೆಯರು ಸೇರಿ ಒಟ್ಟು ನಾಲ್ವರು ಸಂತ್ರಸ್ತರನ್ನು ಗುರುತಿಸಲಾಗಿದೆ. ಈ ಜಾಲದ ಬಗ್ಗೆ ಸಿಸಿಬಿ ಪೊಲೀಸರು ಸಮಗ್ರ ತನಿಖೆ ನಡೆಸಿದಾಗ ಇನ್ನಷ್ಟು ಆರೋಪಿಗಳು ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಮಂಗಳೂರು: ಅಪಾರ್ಟ್ ಮೆಂಟ್ ಒಂದರ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ.!

ಒಟ್ಟು ಆರು ಬಾರಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಇನ್ನಷ್ಟು ಮಂದಿ ಈ ಜಾಲದಲ್ಲಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

vtv vitla
vtv vitla

ದೂರು ನೀಡಿದ ಅಪ್ರಾಪ್ತ ಯುವತಿ ಆರಂಭದಲ್ಲಿ ಲೈಂಗಿಕ ಕ್ರಿಯೆಗೆ ಸಹಕಾರ ನೀಡಿರಲಿಲ್ಲ. ಆದರೆ ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ನಿನ್ನ ವಿಡಿಯೋ ರೆಕಾರ್ಡ್ ಆಗಿದೆ ಎಂದು ಆಕೆಯನ್ನು ಹೆದರಿಸಿ ಬಲವಂತವಾಗಿ ಈ ಕೃತ್ಯಕ್ಕೆ ಬಳಸಿಕೊಳ್ಳಲಾಗಿದೆ.

ಆದರೆ ಇನ್ನಷ್ಟು ಮಂದಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಗ ಆಕೆ ಮಾಹಿತಿಯನ್ನು ಸಂಸ್ಥೆಯ ಪ್ರಿನ್ಸಿಪಾಲ್ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದ್ದರು. ಅಲ್ಲಿಂದ ಪೊಲೀಸ್ ಇಲಾಖೆಗೆ ದೂರು ಬಂದಿತ್ತು. ಇದೀಗ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಕಮಿಷನರ್ ತಿಳಿಸಿದ್ದಾರೆ.

ಆರೋಪಿಗಳು ವ್ಯವಸ್ಥಿತವಾಗಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದರು. ಮೊದಲ ಹಾಗೂ ಎರಡನೇ ಆರೋಪಿ ಮೊದಲು ವಿದೇಶದಲ್ಲಿದ್ದು, ಅಲ್ಲಿಂದ ಇಲ್ಲಿಗೆ ಬಂದ ಬಳಿಕ ಪೂರ್ವ ತಯಾರಿ ಮಾಡಿಕೊಂಡೇ ಈ ಜಾಲ ನಿರ್ವಹಿಸುತ್ತಿದ್ದರು. ಮನೆಯನ್ನು ಬಾಡಿಗೆಗೆ ಪಡೆದು ಯಾರಿಗೂ ಗೊತ್ತಾಗದ ರೀತಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು.

ಜಾಲ ನಡೆಸುತ್ತಿದ್ದ ಆರೋಪಿಗಳು ಯುವತಿಯರ ಹಾಗೂ ಬರುವ ಗ್ರಾಹಕರ ಬಗ್ಗೆ ನೋಟ್ ಬುಕ್‌ನಲ್ಲಿ ದಾಖಲೆಗಳನ್ನು ಬರೆದಿಟ್ಟಿದ್ದರು. ಅವರ ಹೆಸರು,ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ. ಅಲ್ಲದೆ ಗ್ರಾಹಕರು ಅಪ್ರಾಪ್ತೆಯರನ್ನೇ ಕೇಳಿ ಈ ಫ್ಲ್ಯಾಟ್‌ಗೆ ಬರುತ್ತಿದ್ದರು. ಈ ಫ್ಲ್ಯಾಟ್ ಅಲ್ಲದೆ ಇತರ ಕೆಲವು ಮನೆಗಳನ್ನು ಉಪಯೋಗಿಸಿರುವ ಬಗ್ಗೆ ಮಾಹಿತಿ ಇದೆ ಎಂದು ಕಮಿಷನರ್‌ ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!