Friday, March 29, 2024
spot_imgspot_img
spot_imgspot_img

ಮಂಗಳೂರು: ಬಾಡಿಗೆ ಮನೆಯಲ್ಲಿ ಗಾಂಜಾ ಮಾರಾಟ ಮತ್ತು ಸೇವನೆ; ನಾಲ್ವರು ಅರೆಸ್ಟ್

- Advertisement -G L Acharya panikkar
- Advertisement -

ಮಂಗಳೂರು: ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಸುರತ್ಕಲ್ ಬಳಿಯ ಹೊಸಬೆಟ್ಟಿನ ಕುಳಾಯಿ ಎಂಬಲ್ಲಿ ಬಾಡಿಗೆ ಮನೆ ಪಡೆದು ಅಕ್ರಮಕ್ಕೆ ಕೈಹಾಕಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸುರತ್ಕಲ್ ಪೊಲೀಸರು ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ಮೀನಕಳಿಯ ನಿವಾಸಿ ವಿಕ್ರಂ ಅಲಿಯಾಸ್ ಜಯರಾಂ(30), ಕೊಡಿಯಾಲಬೈಲಿನ ಸತೀಶ್(50), ಕುಳಾಯಿ ಹೊನ್ನಕಟ್ಟೆಯ ಸರ್ಫರಾಜ್(37), ಬೈಕಂಪಾಡಿಯ ಅಕ್ಷಯ್ (33) ಬಂಧಿತ ಆರೋಪಿಗಳು. ಬಂಧಿತರಿಂದ 790 ಗ್ರಾಮ್ ಗಾಂಜಾ, ನಾಲ್ಕು ಮೊಬೈಲ್ ಫೋನ್, ಒಂದು ಆಟೋ ರಿಕ್ಷಾ, ತೂಕ ಮಾಪನ ವಶಕ್ಕೆ ಪಡೆದಿದ್ದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!