Sunday, May 5, 2024
spot_imgspot_img
spot_imgspot_img

ಮಂಗಳೂರು : ಮನಪಾ ಮುಖ್ಯ ಲೆಕ್ಕಾಧಿಕಾರಿಯವರ ವಾಹನ ಚಾಲಕ ಆತ್ಮಹತ್ಯೆ

- Advertisement -G L Acharya panikkar
- Advertisement -

ಮಂಗಳೂರು: ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಯವರ ವಾಹನ ಚಾಲಕ ಇಂದ್ರಾಳಿ ರೈಲ್ವೆ ಸೇತುವೆ ಸಮೀಪ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಹೆಬ್ರಿ ಸಳಂಜೆ ಗ್ರಾಮದ ಸಂಜೀವ ಹೆಗ್ಡೆ ಎಂಬವರ ಪುತ್ರ ರಾಘವೇಂದ್ರ ಹೆಗ್ಡೆ ಎಂದು ಗುರುತಿಸಲಾಗಿದೆ.

ವೈಯಕ್ತಿಕ ಕಾರಣದಿಂದ ಮನ ನೊಂದ ರಾಘವೇಂದ್ರ ಹೆಗ್ಡೆ ಅವರು, ಮಂಗಳೂರು ಮನಪಾ ಮುಖ್ಯ ಲೆಕ್ಕಾಧಿಕಾರಿಗೆ ಸಂಬಂಧಿಸಿದ ಕಾರನ್ನು ಅಲ್ಲೇ ಸಮೀಪ ನಿಲ್ಲಿಸಿ, ಬಳಿಕ ಚಲಿಸುತ್ತಿದ್ದ ರೈಲಿನಡಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಇನ್ನು ಮೃತದೇಹ ಸಂಪೂರ್ಣ ಛಿದ್ರಗೊಂಡಿದೆ. ಸ್ಥಳದಲ್ಲಿ ಪತ್ತೆಯಾದ ಕಾರಿನ ಹಸಿರು ಫಲಕದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಎಂಬ ಉಲ್ಲೇಖ ಹಾಗೂ ಮೃತರ ಕಿಸೆಯಲ್ಲಿ ಆಧಾರ್ ಕಾರ್ಡ್ ಆಧಾರದಲ್ಲಿ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!