Saturday, May 4, 2024
spot_imgspot_img
spot_imgspot_img

ಮಂಗಳೂರು: ಮೀನುಗಾರಿಕೆ ಸ್ಥಗಿತಗೊಳಿಸಿದ ಶೇ ೫೦ಕ್ಕೂ ಅಧಿಕ ಬೋಟ್’ಗಳು

- Advertisement -G L Acharya panikkar
- Advertisement -

ಮಂಗಳೂರು: ಏಪ್ರಿಲ್-ಮೇ ತಿಂಗಳ ಸಂದರ್ಭದಲ್ಲಿ ಹವಾಮಾನ ವೈಪರೀತ್ಯಗಳು ಕಡಿಮೆ ಇದ್ದು ಉಳಿದೆಲ್ಲ ಸಮಯಗಳಿಗಿಂತ ಅತ್ಯಧಿಕ ಸಂಖ್ಯೆಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಆದರೆ, ಗಗನಕ್ಕೇರುತ್ತಿರುವ ಡೀಸೆಲ್ ಬೆಲೆ ಸೀಸನ್ ಅವಧಿಯಲ್ಲಿ ಮೀನುಗಾರಿಕೆಗೆ ತಡೆಯೊಡ್ಡಿದೆ.

Mangaluru: Confusion prevails after emergency anchoring of fishing boats at  NMPT - Daijiworld.com

ದೇಶದಲ್ಲಿ ದಿನದಿಂದ ದಿನಕ್ಕೆ ತೈಲಬೆಲೆ ಹೆಚ್ಚಳವಾಗುತ್ತಿದೆ. ಗಗನಕ್ಕೇರುತ್ತಿರುವ ಡೀಸೆಲ್ ಬೆಲೆಯಿಂದ ಕರಾವಳಿಯ ಪ್ರಮುಖ ವಹಿವಾಟಾದ ಮತ್ಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ. ಮೀನುಗಾರಿಕೆಗೆ ತೆರಳುವ ಆಳ ಸಮುದ್ರ ಬೋಟ್, ಪರ್ಷಿಯನ್ ಬೋಟ್’ಗಳಿಗೆ ಡೀಸೆಲ್ ಅತ್ಯಗತ್ಯ. ಆಳಸಮುದ್ರಕ್ಕೆ ತೆರಳುವ ಬೋಟ್’ಗಳು ಲಕ್ಷಾಂತರ ರೂ. ಗಳ ಡೀಸೆಲ್ ತುಂಬಿಸಿ ಮೀನುಗಾರಿಕೆಗೆ ಹೋಗುತ್ತವೆ. ಡೀಸೆಲ್ ವೆಚ್ಚವೂ ಸೇರಿದಂತೆ ಸುಮಾರು ೫ ಲಕ್ಷ ರೂ. ವರೆಗೆ ಒಂದು ಟ್ರಿಪ್’ಗೆ ಖರ್ಚಾಗುತ್ತದೆ. ಆದರೆ, ಮೀನುಗಾರಿಕೆಗೆ ತೆರಳುತ್ತಿರುವ ಬೋಟ್’ಗಳಿಗೆ ಅಷ್ಟು ಪ್ರಮಾಣದ ಮೀನುಗಳು ಬಲೆಗೆ ಬೀಳುತ್ತಿಲ್ಲ. ಪರಿಣಾಮ ಮತ್ಸೋದ್ಯಮಿಗಳು ನಷ್ಟಕ್ಕೊಳಗಾಗುತ್ತಿದ್ದಾರೆ. ನಷ್ಟದ ಭೀತಿಯ ಹಿನ್ನೆಲೆಯಲ್ಲಿ ಬೋಟ್’ಗಳ ಮಾಲೀಕರು ಮೀನುಗಾರಿಕೆಗೆ ಬೋಟ್’ಗಳನ್ನು ಕಳುಹಿಸದೆ ಧಕ್ಕೆಯಲ್ಲಿಯೇ ಲಂಗರು ಹಾಕಿದ್ದಾರೆ.

Thumbnail image

ಮೀನುಗಾರಿಕೆಗೆ ತೆರಳಿದರೆ ಇಷ್ಟೇ ಪ್ರಮಾಣದ ಮೀನುಗಳು ಸಿಗುತ್ತದೆ ಎಂಬುದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಮೀನುಗಳ ಲಭ್ಯತೆ ಮತ್ತು ಯಾವ ಮೀನು ಎಂಬುದರ ಮೇಲೆ ಒಂದು ಬೋಟ್’ನಲ್ಲಿ ಎಷ್ಟು ಮೌಲ್ಯದ ಮೀನು ಸಿಗುತ್ತದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ಸುಮಾರು ೪ ಲಕ್ಷ ರೂ. ವಿನಿಂದ ೭-೮ ಲಕ್ಷ ವರೆಗೆ ಮೀನುಗಳು ಸಿಗುತ್ತವೆಯಾದರೂ ಇದು ಬೋಟ್ ಮಾಲೀಕರಿಗೆ ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ. ಈ ರೀತಿಯ ಪರಿಸ್ಥಿತಿ ಇರುವುದರಿಂದ ಲಾಭ- ನಷ್ಟ ಎರಡೂ ಈ ಉದ್ಯಮದಲ್ಲಿದೆ. ಇನ್ನು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿರುವುದು ನಷ್ಟವನ್ನು ಮತ್ತಷ್ಟು ಹೆಚ್ಚಿಸಿದರೆ, ಲಾಭಾಂಶವನ್ನು ಕಡಿಮೆ ಮಾಡಿದೆ. ಮೀನುಗಾರಿಕಾ ಬೋಟ್’ಗೆ ಸರ್ಕಾರ ನೀಡುವ ಡೀಸೆಲ್ ಸಬ್ಸಿಡಿ ಸಕಾಲದಲ್ಲಿ ಕೈಸೇರುತ್ತಿಲ್ಲ. ಮೀನು ಮಾರಾಟದ ಹಣವು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಕಾರ್ಮಿಕರ ವೇತನ, ಮೆಂಟೆನೆನ್ಸ್ ಸೇರಿದಂತೆ ಮಾಡಲಾಗುವ ಖರ್ಚಿನಿಂದ ಲಾಭ ಸಿಗುತ್ತಿಲ್ಲ. ಲೋನ್’ಗಳನ್ನು ಕಟ್ಟಲಾಗದೆ ಮಾಲೀಕರು ಬೋಟ್’ಗಳನ್ನು ಮೀನುಗಾರಿಕೆಗೆ ಕಳುಹಿಸುತ್ತಿಲ್ಲ ಎನ್ನುತ್ತಾರೆ.\

Fisheries net Maharashtra support
- Advertisement -

Related news

error: Content is protected !!