Thursday, May 16, 2024
spot_imgspot_img
spot_imgspot_img

ಮಂಗಳೂರು: ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ರಿಯಾನಾ ಧೃತಿ ಫೆರ್ನಾಂಡಿಸ್ ಆಯ್ಕೆ

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರಿನ ನಿವಾಸಿ ರಿಯಾನಾ ಧೃತಿ ಫೆರ್ನಾಂಡಿಸ್(12) ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಸೇಂಟ್ ಅಲೋಶಿಯಸ್ ಈಜುಕೊಳ, ಮಂಗಳೂರಿನ ‘ವಿ ಒನ್ ಆಕ್ವಾ ಸೆಂಟರ್’ ನಲ್ಲಿ ತರಬೇತಿ ಪಡೆದ ಇವರು ಬೆಂಗಳೂರಿನ ಬಸವನಗುಡಿಯಲ್ಲಿ ಸೆ. 24 ರಿಂದ ಸೆ. 28 ರ ವರೆಗೆ ನಡೆದ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 1 ಚಿನ್ನ, 2 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಪಡೆದು ಬಸವನಗುಡಿ ಅಕ್ವಾಟಿಕ್ ಸೆಂಟರ್ ಮತ್ತು ಅಕ್ಟೋಬರ್ 19 ರಿಂದ ಅಕ್ಟೋಬರ್ 23 ರ ನಡುವೆ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇವರು ಲೋಕರಾಜ್ ವಿಟ್ಲ ಮತ್ತು ಯಜೇಶ್ ಬೆಂಗ್ರೆ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!