Monday, August 10, 2026
spot_imgspot_img
spot_imgspot_img

ಮಂಗಳೂರು: ವಾಟ್ಸಾಪ್‌ನಲ್ಲಿ ಲೊಕೇಶನ್‌ ಕಳುಹಿಸಿ ನದಿಗೆ ಹಾರಿದ ಅಂಚೆ ಉದ್ಯೋಗಿ

- Advertisement -
- Advertisement -

ಮಂಗಳೂರು ಪೋಸ್ಟ್ ಆಫೀಸ್ ಉದ್ಯೋಗಿ ಮಂಡ್ಯ ಮೂಲದ ಯುವಕ ರಾಕೇಶ್ ಗೌಡ (26) ಸೇತುವೆಯಿಂದ ನದಿಗೆ ಹಾರಿ ನಾಪತ್ತೆಯಾದ ಘಟನೆ ಪಾವಂಜೆ ನಡೆದಿದೆ.

ನದಿಗೆ ಹಾರುವ ಮುನ್ನ ತನ್ನ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಬೈಕ್ ನಲ್ಲಿ ಬಿಟ್ಟಿದ್ದರು ಎನ್ನಲಾಗಿದೆ. ಅಲ್ಲದೆ ತಾನು ನದಿಗೆ ಹಾರುತ್ತಿರುವ ಕುರಿತು ಸಂಬಂಧಿಕರಿಗೆ ವಾಟ್ಸಾಪ್‌ ನಲ್ಲಿ ಲೊಕೇಶನ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಕೇಶ್ ಗೌಡ ಅವರ ಮಾವ ಅಬಕಾರಿ ಇಲಾಖೆಯ ಡಿವೈಎಸ್ಪಿ ಆಗಿದ್ದು ಇಲಾಖೆಯ ಸಿಬ್ಬಂದಿಗಳು ಮತ್ತು, ಮುಲ್ಕಿ ಮತ್ತು ಸುರತ್ಕಲ್ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!