Friday, April 26, 2024
spot_imgspot_img
spot_imgspot_img

ಮಂಗಳೂರು: ವಿದ್ಯಾರ್ಥಿನಿಗೆ ಕಿರುಕುಳ ನೀಡಿ ಆಕೆಯ ಭಾವ ಚಿತ್ರ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ; ಪ್ರಾಧ್ಯಾಪಕನ ಬಂಧನ

- Advertisement -G L Acharya panikkar
- Advertisement -
driving

ಮಂಗಳೂರು: ವಿದ್ಯಾರ್ಥಿನಿಯೊಬ್ಬರಿಗೆ ಕಿರುಕುಳ ನೀಡುತ್ತಿದ್ದ ಹಾಗೂ ಆಕೆಯ ಭಾವಚಿತ್ರ ಎಡಿಟ್‌ ಮಾಡಿ ಸೊಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟ ಆರೋಪದಲ್ಲಿ ಪ್ರಾಧ್ಯಾಪಕನೊಬ್ಬನನ್ನು ನಗರದ ಸೈಬರ್ ಕ್ರೈಮ್‌ ಪೊಲೀಸರು ಬಂಧಿಸಿದ್ದಾರೆ

ಡಾ. ಕೊಂಡೂರು ಸುಧೀರ್ ಕುಮಾರ್ ಬಂಧಿತ ಆರೋಪಿ. ಈತ ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಈತನ ವಿರುದ್ದ ವಿದ್ಯಾರ್ಥಿನಿಯ ಪೋಷಕರು 2021ರ ಮಾರ್ಚ್ 10ರಂದು ಮಂಗಳೂರಿನ ಸೈಬರ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದು ಆಂಧ್ರಪ್ರದೇಶದಿಂದ ಬಂಧಿಸಿ ಕರೆ ತಂದಿದ್ದಾರೆ.

ಪಿಎಚ್‌ಡಿ ಸಂಶೋಧನೆಯಲ್ಲಿ ತೊಡಗಿಸುವಕೊಳ್ಳುವ ಆಸಕ್ತಿ ಹೊಂದಿದ್ದ ಸಂತ್ರಸ್ತ ವಿದ್ಯಾರ್ಥಿನಿಗೆ 2018ರಲ್ಲಿ ಆರೋಪಿ ಡಾ. ಕೊಂಡೂರು ಪರಿಚಯವಾಗಿದೆ. ಆ ಬಳಿಕ ಅಕೆಯ ಪಿಎಚ್ ಡಿ ಆದ್ಯಯನಕ್ಕೆ ತನ್ನನ್ನೂ ಮಾರ್ಗದರ್ಶಕನನ್ನಾಗಿ ನೇಮಿಸುವಂತೆ ದುಂಬಾಲು ಬಿದ್ದಿದ್ದ. ಇದಕ್ಕೆ ಒಪ್ಪಿದ ಆಕೆ ವಿಶ್ವವಿದ್ಯಾನಿಲಯಕ್ಕೆ ಅನುಮತಿಗೆ ಕಳುಹಿಸಿದಾಗ ಆ ವ್ಯಕ್ತಿಗೆ ಅರ್ಹತೆಯಿಲ್ಲ ಎನ್ನುವ ಕಾರಣಕ್ಕೆ ಆತನ ಕೋರಿಕೆಯನ್ನು ನಿರಾಕರಿಸಲಾಗಿತ್ತು.

ಇದಾದ ಬಳಿಕ ಈತ ವಿದ್ಯಾರ್ಥಿನಿಗೆ ಮತ್ತು ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದ ಹಾಗೂ ವಿದ್ಯಾರ್ಥಿನಿಯ ಭಾವ ಚಿತ್ರವನ್ನು ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದ ಷರತ್ತು ಬದ್ಧ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ.

- Advertisement -

Related news

error: Content is protected !!