Sunday, September 13, 2026
spot_imgspot_img
spot_imgspot_img

ಮಂಗಳೂರು: ಸುರತ್ಕಲ್ ಬೀಚ್ ನಲ್ಲಿ ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ; ಬಜರಂಗದಳದಿಂದ ಪೊಲೀಸರಿಗೆ ಮಾಹಿತಿ, ಜೋಡಿಗಳ ಜೊತೆಯಿದ್ದ ಬಾಲಕ ಪೋಲಿಸರ ವಶಕ್ಕೆ..!

- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಕುದ್ರೋಳಿಯ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯೊಬ್ಬಳು ಕಾರಿನಲ್ಲಿ ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬೀಚ್ ನಲ್ಲಿ ಇಂದು ಸಂಜೆ ನಡೆದಿದೆ.

ಇಂದು ಸಂಜೆ ಸುರತ್ಕಲ್ ಬೀಚ್ ನ ಬಳಿ ಕಾರ್ ನಲ್ಲಿ ಜೋಡಿಯೊಂದು ಏಕಾಂತದಲ್ಲಿದ್ದು, ಪಕ್ಕದಲ್ಲೇ ಇನ್ನೊಬ್ಬ ಬಾಲಕ ಅವರಿಗೆ ಸೆಕ್ಯುರಿಟಿ ನೀಡುವ ಕಾರ್ಯ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸುರತ್ಕಲ್ ಭಜರಂಗದಳದ ಕಾರ್ಯಕರ್ತರು ಮೊದಲು ಆತನನ್ನೇ ವಿಚಾರಿಸಿದ್ದು, ಈ ವೇಳೆ ಜೋಡಿ ಕಾರಿನಲ್ಲಿ ಎಸ್ಕೇಪ್ ಆಗಿದ್ದು, ನಂತರ ಬಾಲಕನನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಸದ್ಯ ಅನ್ಯಕೋಮಿನ ಯುವಕನ ಜೊತೆ ಪತ್ತೆಯಾದ ಯುವತಿ ಇಬ್ಬರನ್ನೂ ಸುರತ್ಕಲ್ ಪೋಲಿಸರು ಹುಡುಕಾಡುತ್ತಿದ್ದು, ಯುವತಿ ಜೊತೆ ಸ್ಥಳದಿಂದ ಎಸ್ಕೇಪ್ ಆದ ಯುವಕನನ್ನು ಮೆಹಬೂಬ್ ಎಂದು ಗುರುತಿಸಲಾಗಿದೆ.
ಯುವತಿ ಹುಬ್ಬಳ್ಳಿ ಮೂಲದವಳಾಗಿದ್ದು ಕಂಪ್ಯೂಟರ್ ಸೈನ್ಸ್ ಓದುತ್ತಿದ್ದು, ಕೃಷ್ಣಾಪುರದ ಪಿಜಿಯೊಂದರಲ್ಲಿ ವಾಸ್ತವ್ಯ ಇರುವುದಾಗಿ ಆಪ್ತ ಮೂಲಗಳು ಮಾಹಿತಿ ನೀಡಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬಜರಂಗದಳ ಕಾರ್ಯಕರ್ತರು ಮೊದಲಿನಿಂದಲೂ ಇಂತಹ ಕೃತ್ಯಗಳ ಮೇಲೆ ಕಣ್ಣಿಟ್ಟಿದ್ದು, ಲವ್ ಜಿಹಾದ್ ಗೆ ಬಲಿಯಾಗುವ ಹುಡುಗಿಯರ ರಕ್ಷಣೆಯಲ್ಲಿ ತೊಡಗಿದೆ‌. ಅಲ್ಲದೆ ಬೀಚ್ ನಲ್ಲಿ ಇಂತಹ ಲವ್ ಜಿಹಾದ್ ಕೃತ್ಯಗಳು ನಡೆಯುತ್ತಿದ್ದು, ಪೋಲಿಸರು ಈ ಬಗ್ಗೆ ಗಮನ ಹರಿಸಬೇಕಿದೆ ಎಂದು ಭಜರಂಗದಳದ ಮುಖಂಡರು ಆಗ್ರಹಿಸಿದ್ದಾರೆ.
ಕೆಲವೊಮ್ಮೆ ಅತಿರೇಕದಿಂದ ವರ್ತಿಸಿ ನೈತಿಕ ಪೋಲಿಸ್ ಗಿರಿ ಹೆಸರಿನಲ್ಲಿ ಕೇಸ್ ಹಾಕಿಸಿಕೊಳ್ಳುವ ಬದಲು ಇದೇ ರೀತಿಯ ತಂತ್ರ ಅನುಸರಿಸಿದಲ್ಲಿ ಧರ್ಮದ ರಕ್ಷಣೆಯೂ ಆಗುತ್ತದೆ, ಕೇಸ್ ಕೋರ್ಟ್ ಮುಂತಾದ ಜಂಜಾಟದಿಂದ ಬಚಾವ್ ಆಗಬಹುದು ಎಂಬುದು ಸಾರ್ವಜನಿಕರ ಅಭಿಮತ.

- Advertisement -

Related news

error: Content is protected !!