Monday, June 22, 2026
spot_imgspot_img
spot_imgspot_img

ಮಂಗಳೂರು: ಹಿಂದೂ ಯುವಕನಿಗೆ ಹೊಟ್ಟೆಯ ಹಸಿವು ನೀಗಿಸಿ, ಚಿಕಿತ್ಸೆಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಮಾಡೂರಿನ ಮುಸ್ಲಿಂ ಯುವತಿ

- Advertisement -
- Advertisement -

ದ್ವೇಷ ಸಮಾಜಕ್ಕೊಂದು ಮಾನವೀಯ ಪಾಠ; ಜ್ವರದಿಂದ ನಿತ್ರಾಣಗೊಂಡು ಅಸ್ವತ್ರೆಯ ಮುಂದೆ ಚಿಕಿತ್ಸೆ ಸಿಗದೆ ನಿರಾಶೆಯ ಕಣ್ಣುಗಳಿಂದ ಸಹಾಯ ಹಸ್ತಕ್ಕಾಗಿ ಎದುರು ನೋಡುತ್ತ ಜ್ವರದಿಂದ ನಡುಗುತ್ತಿದ್ದ ಹಿಂದು ಸಹೋದರ ಸುಬ್ರಹ್ಮಣ್ಯನಿಗೆ ಹೊಟ್ಟೆಯ ಹಸಿವು ನೀಗಿಸಿ ಚಿಕಿತ್ಸೆಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಮಾಡೂರಿನ ಮುಸ್ಲಿಂ ಯುವತಿ ಸಬ್ರೀನಾ. ನಿನ್ನೆ ಮಾಡೂರಿನ ಯುವತಿಯೊಬ್ಬಳು ಮಂಗಳೂರಿನ ಸರಕಾರಿ ಅಸ್ವತ್ರೆಗೆ ಕಾಲು ನೋವಿಗೆ ಔಷಧಿ ತರಲು ಹೋದಾಗ ಅಸ್ವತ್ರೆಯ ಮುಂಭಾಗದಲ್ಲಿ ಜ್ವರದಿಂದ ನಿತ್ರಾಣಗೊಂಡು ನಡುಗುತ್ತಿರುವ ಯುವಕನನ್ನು ಕಂಡು ಕನಿಕರದಿಂದ ಅವನತ್ತ ಹೋಗಿ ವಿಚಾರಿಸಿದಾಗ, ಅವನು ತೀವ್ರವಾದ ಜ್ವರ ಪೀಡಿತನಾಗಿದ್ದು, ಏನೋ ಕಾರಣಾಂತರದಿಂದ ಮನೆಯವರೊಡನೆ ಮುನಿಸಿಕೊಂಡ ಮನೆ ಬಿಟ್ಟು ಬಂದಿದ್ದನು.

ಮಂಗಳೂರಿನಿಂದ ದೂರದ ಉಡುಪಿ ಕಾಪು ನಿವಾಸಿಯಾದ ಸುಬ್ರಹ್ಮಣ್ಯ ಎಂಬ ಯುವಕ ಅಲೆದಾಡುತ್ತ ಮಂಗಳೂರಿನತ್ತ ಬಂದಿದ್ದ, ಇವನಿಗೆ ಸರಿಯಾದ ಊಟ ವಸತಿ ಇಲ್ಲದೆ, ನಿರಂತರವಾಗಿ ಕಳೆದ ಎಳೆಂಟು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣ ಇವನ ಮೈ ಒದ್ದೆಯಾಗಿ ಚಳಿ ಹಿಡಿದು ಹೈ ಟೆಂಪರೇಚರ್ ಜ್ವರ ಬರುತ್ತಿತ್ತು, ಇನ್ನೊಂದೆಡೆ ಕೈಯಲ್ಲಿ ಹಣ ಇಲ್ಲದ ಕಾರಣ ಹೊಟ್ಟೆಗೆ ಊಟ ಇಲ್ಲದೆ, ಜ್ವರದ ತೀವ್ರತೆಯಿಂದ ಸಂಪೂರ್ಣ ಬಳಲಿ ಹೋಗಿದ್ದ ಆತ ಮದ್ದಿಗೆಂದು ಆಸ್ಪತ್ರೆಗೆ ಹೋಗಿದ್ದ, ಆದರೆ ಇವನಿಗೆ ಹಿಡಿತವಿಲ್ಲದ ಜ್ವರದ ಜೊತೆ ಮನೆಯವರು ಯಾರು ಇಲ್ಲದ ಕಾರಣ ಇವನನ್ನು ಅಸ್ವತ್ರೆಯ ಸಿಬಂದಿಗಳು ಆತನನ್ನು ಹೊರ ರೋಗಿಯಾಗಿ ಕೂಡ ದಾಖಲು ಮಾಡಿರಲಿಲ್ಲ, ಅದ್ದರಿಂದ ಅಸ್ವತ್ರೆಯ ಹೊರಗೆ ಒಂದೆಡೆ ಬಿದ್ದು ಚಲಿಯಿಂದ ನಡುಗುತ್ತ ನರಳುತ್ತಿದ್ದನು.

ಇದನ್ನು ಕಂಡ ಮುಸ್ಲಿಂ ಯುವತಿಯು ಮೊದಲು ಆತನಿಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿ ಅವನನ್ನು ವಿಚಾರಿಸಿ ವಿಷಯ ತಿಳಿದು ಕೊಂಡ ಕೂಡಲೇ ಅವನಿಗೆ ಅನ್ನ ನೀಡಿ ಹಸಿವು ನೀಗಿಸಿದಳು ಬಳಿಕ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಮಾಡೂರಿನ BLOOD DONORS MANGALORE ಮತ್ತು MNG FOUNDATION ಇದರ ಕಾರ್ಯನಿರ್ವಾಹಕ ಮಾಡೂರು ಫಯಾಜ್‌ನಿಗೆ ಕರೆ ಮಾಡಿ ವಿಷಯ ತಿಳಿಸಿದಳು, ಫಯಾಜ್ ಹೇಳಿದ ನಿರ್ದೇಶನದಂತೆ ಅವನನ್ನು ಅವಳೇ ಅಸ್ವತ್ರೆಯಲ್ಲಿ ದಾಖಲಿಸಿ ಫಯಾಜ್ ಅವರ ಮೊಬೈಲ್ ನಂಬರ್ ಅಸ್ವತ್ರೆಯ ದಾಖಲಾತಿಯಲ್ಲಿ ಬರೆಯಿಸಿ ಅವಳು ತಾನು ಅಸ್ವತ್ರೆಗೆ ಹೋದ ಕಾರ್ಯ ಪೂರ್ತಿ ಗೊಳಿಸಿ ಮನೆಗೆ ಬಂದಿದ್ದಳು, ಬಳಿಕ ಫಯಾಜ್ ಆಸ್ಪತ್ರೆಗೆ ಹೋಗಿ ಆತನಿಂದ ಆತನ ಮನೆಯವರ ಪೋನ್ ನಂಬರ್ ಪಡೆದು ಅವನ ಮನೆಗೆ ವಿವರ ತಿಳಿಸಿದಾಗ ಅವರು ಕೂಡ ವ್ಯಾಕ್ಸಿನ್ ಪಡೆದು ಜ್ವರ ಬರುತ್ತಿರುವ ಕಾರಣ ಈಗ ಬರಲಾಗುದಿಲ್ಲ ಅಸ್ವತ್ರೆಯಲ್ಲಿ ದಾಖಲಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನಾಳೆ ಮಂಗಳೂರಿಗೆ ಬಂದು ಕರೆದುಕೊಂಡು ಹೋಗುದಾಗಿ ಫಯಾಜ್ ಮಾಡೂರು ಇವರಿಗೆ ತಿಳಿಸಿದ್ದರು.

ಈ ಬಗ್ಗೆ ಆ ಯುವತಿಯನ್ನು ವಿಚಾರಿಸಿದ ಫಯಾಜ್ ನೀನೊಂದು ಮುಸ್ಲಿಂ ಯುವತಿಯಾಗಿ ಇಂತಹ ಕೆಲಸಕ್ಕೂ ಕೈ ಹಾಕಲು ನಿನಗೆ ಹೇಗೆ ಧೈರ್ಯ ಬಂತು ಎಂದು ಕೇಳಿದಾಗ ಮಾಡೂರಿನ ಸಬ್ರೀನಾ ಫಯಾಜ್ ಗೆ ತಿಳಿಸಿದ್ದು ಹೀಗೆ, “ನಾನು ನನ್ನ ನಿತ್ಯ ಜೀವನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡ ಮತ್ತು ನೋಡಿಕೊಂಡ ಸಮಾಜ ಸೇವಕರಾದ ನಿಮ್ಮ ಸಮಾಜ ಸೇವೆಯೇ ನನಗೆ ಈ ಕೆಲಸ ಮಾಡಲು ಧೈರ್ಯ ಮತ್ತು ಪ್ರೇರಣೆಗೆ ಸ್ಪೂರ್ತಿ ನೀಡಿತು ಎಂದು ಹೇಳಿ ಕೊಂಡಾಗ ಇದೊಂದು ಸಾಮಾನ್ಯ ವಿಷಯವಲ್ಲ, ಇದರಿಂದ ಸಮಾಜಕ್ಕೆ ಎರಡು ರೀತಿಯ ಸಂದೇಶವನ್ನು ನೀಡುತ್ತಿದ್ದ ನಿಟ್ಟಿನಲ್ಲಿ ನಿಮಗೆ ಇದನ್ನು ಈ ಮೂಲಕ ತಿಳಿಯ ಪಡಿಸಲು ಇಷ್ಟ ಪಟ್ಟಿರುತ್ತೇನೆ, ಮತ್ತು ನನ್ನ ಕೋರಿಕೆ ನಿಮ್ಮಲ್ಲಿ ಏನೆಂದರೆ ಜಾತಿ ಧರ್ಮಗಳು ಇದೀಗ ಮಾನವೀಯತೆ ಮುಂದೆ ಕೆಲಸಕ್ಕೆ ಬಾರದ ಧಾರ್ಮಿಕ ಗುಂಪುಗಳಷ್ಟೇ ಮತ್ತು ನಾವು ನೋಡಿ ಕಲಿಯಲು ನಮ್ಮ ಮುಂದಿನ ಯುವ ಪೀಳಿಗೆಗೆ ನಾವು ಒಳಿತಿನ ಪಾಠಗಳನ್ನು ಕಲಿಸುವ ಶಾಲೆಗಳಾಗಿ ಸಮಾಜದಲ್ಲಿ ನಾವುಗಳು ಇನ್ನಾದರೂ ಮಾದರಿಯಾಗಬೇಕೆಂದು ಹೇಳ ಬಯಸುತ್ತೇನೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!