Sunday, May 19, 2024
spot_imgspot_img
spot_imgspot_img

ಮಂಗಳೂರು: 23/3 ಕಿರು ಚಿತ್ರದ ಫಸ್ಟ್ ಲುಕ್ ಅನಾವರಣ

- Advertisement -G L Acharya panikkar
- Advertisement -

ಮಂಗಳೂರು: Block lence creations ರವರ ಮೊದಲ ಕಿರು ಚಿತ್ರ 23/3 (short movie) ಪ್ರಥಮ ಪೋಸ್ಟರನ್ನು (ಫಸ್ಟ್ ಲುಕ್ ) ಮಂಗಳೂರು ನಗರದ ಕುಡ್ಲ ಪ್ಯಾರಾಡೈಸ್ ಐಲ್ಯಾಂಡ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಅರುಣ್ ಜೆ ಚಕ್ರವರ್ತಿ ಮತ್ತು ಗೋಪಾಲಕೃಷ್ಣ ಕುಂದರ್ ಅನಾವರಣಗೊಳಿಸಿದರು.

ವೇದಿಕೆಯಲ್ಲಿ ಎಸಿಪಿ ಪರಮೇಶ್ವರ್ ಹೆಗಡೆ, ಎಸಿಪಿ ಎಂ ಎ ನಟರಾಜ್, ಎಸಿಪಿ ದಿನಕರ್ ಶೆಟ್ಟಿ, ಎಸಿಪಿ ಮಹೇಶ್ ಕುಮಾರ್, ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ, ಯಕ್ಷರಂಗದ ಚಾರ್ಲಿ ಚಾಪ್ಲಿನ್ ಬಿರುದಂಕಿತ ಸೀತಾರಾಮ್ ಕುಮಾರ್ ಕಟೀಲ್, ಮಾಧವ ನಾಯ್ಕ್ ಅಡ್ಯಾರ್, ನಿರ್ಮಲಾ ಗೋಪಾಲ್, ಸ್ವಾತಿ, ರೋಹಿತ್ ಬೆಂಗಳೂರು ಹಾಜರಿದ್ದರು.

23/3 ಎಂಬ ಟೈಟಲ್ ಹೊಂದಿರುವ ಕಿರುಚಿತ್ರದ ಪರಿಕಲ್ಪನೆ ಹಾಗೂ ಮುಖ್ಯ ಭೂಮಿಕೆಯಲ್ಲಿ ಜೆ ಬಂಗೇರ, ನಿರ್ದೇಶಕ ಶಿವರಾಜ್ ಕುತ್ತೆತ್ತೂರು, ಛಾಯಾಗ್ರಾಹಕ ನವನೀತ್ ವಿಠ್ಠಲ್ ಹಾಜರಿದ್ದರು. ಈ ಕಿರುಚಿತ್ರವು ಅತೀ ಶೀಘ್ರದಲ್ಲಿ ಬಿಡುಗಡೆಯಾಗಲಿದ್ದು, ಸುನಾದ್ ಗೌತಮ್ ಸಂಗೀತ ನೀಡಿ, ಪೋಸ್ಟರನ್ನು ಗುರುಪ್ರಸಾದ್ ರವರು ರಚಿಸಿದ್ದಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಕಿರುಚಿತ್ರ ಇದಾಗಿದೆ ಕಾರ್ಯಕ್ರಮವನ್ನು ಲಕ್ಷ್ಮೀಶ ಸುವರ್ಣ ನಿರ್ವಹಿಸಿದರು.

- Advertisement -

Related news

error: Content is protected !!