Saturday, May 18, 2024
spot_imgspot_img
spot_imgspot_img

ಮಜಿ ವೀರಕಂಬ ಶಾಲೆಯಲ್ಲಿ ಉಚಿತ ನೇತ್ರಾ ಚಿಕಿತ್ಸಾ ಸೇವಾ ಶಿಬಿರ

- Advertisement -G L Acharya panikkar
- Advertisement -

ಗ್ರಾಮ ಪಂಚಾಯತ್ ವೀರಕಂಬ, ಮಾತೃಶ್ರೀ ಗೆಳೆಯರ ಬಳಗ ವೀರಕಂಬ , ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಆನಂದಾಶ್ರಮ ಸೇವಾ ಟ್ರಸ್ಟ್ (ರಿ) ಪುತ್ತೂರು, ಇದರ ಸಹಭಾಗಿತ್ವದಲ್ಲಿ ಉಚಿತ ನೇತ್ರಾ ಚಿಕಿತ್ಸಾ ಸೇವಾ ಶಿಬಿರವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಜರಗಿತು.

ಪುತ್ತೂರು ಆನಂದಾಶ್ರಮದ ಡಾಕ್ಟರ್ ಪಿ ಗೌರಿ ಪೈ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಶಾಂತ ರಾಜ್ ಉಚಿತ ನೇತ್ರ ಚಿಕಿತ್ಸಾ ಸೇವ ಶಿಬಿರದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.

ಶ್ರೀಮತಿ ಪದ್ಮ ಕಣ್ಣಿನ ದಾನ ಹಾಗೂ ಅಂಗಾಂಗಳ ದಾನದ ಅಗತ್ಯತೆಯ ಬಗ್ಗೆ ಸವಿ ವಿವರವಾದ ಮಾಹಿತಿ ನೀಡಿದರು. ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಡಾಕ್ಟರ್ ನವ್ಯ ನೇತ್ರಾಧಿಕಾರಿ ಅನಿಲ್ ರಾಮಾನುಜನ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಶ್ರೀನಿಧಿ, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್ , ಮೀನಾಕ್ಷಿ , ಜಯಂತಿ ಉಮಾವತಿ ಜನಾರ್ದನ ಪೂಜಾರಿ, ಮಜಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಮೈರ, ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷ ಸುಧಾಕರ ಮೈರ, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೀರಕಂಭ ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತರಾದ ಲೀಲಾವತಿ, ಕೋಮಲಾಕ್ಷಿ, ಸ್ನೇಹಲತಾ ಶೆಟ್ಟಿ, ಶಶಿಕಲಾ, ಕಲ್ಲಡ್ಕ ವೃಷಭ ಎಲೆಕ್ಟ್ರಿಕಲ್ ವಾಹನ ಮಾಲಕ ಪ್ರಕಾಶ್ ಬಿ, ದಿನೇಶ ಆಚಾರ್ಯ ಎರ್ಮೆ ಮಜಲು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಆನಂದಾಶ್ರಮ ಸೇವಾ ಟ್ರಸ್ಟ್ (ರಿ) ಪುತ್ತೂರು ಇವರು ಅಗತ್ಯ ಇರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಿದರು.

- Advertisement -

Related news

error: Content is protected !!