Friday, April 26, 2024
spot_imgspot_img
spot_imgspot_img

ಮತ್ತೊಮ್ಮೆ ಬಾಲಿವುಡ್​ ದಿಗ್ಗಜರ ಮುಂದೆ ಯಕ್ಷಗಾನ ಹಿರಿಮೆ ಸಾರಿದ ಡ್ಯಾನ್ಸರ್ ಕಿಶನ್

- Advertisement -G L Acharya panikkar
- Advertisement -

ಕನ್ನಡದ ಹುಡುಗ ಬಾಲಿವುಡ್​ ಸ್ಟೇಜ್​ ಮೇಲೆ ಸಖತ್​ ಸದ್ದು ಮಾಡ್ತಿರೋದು ತುಂಬಾ ವಿಷಯ ಆದರೆ, ಬಾಲಿವುಡ್​ ನೆಲದಲ್ಲಿ ಕರ್ನಾಟಕದ ಕಲೆಯನ್ನು ಎತ್ತಿ ತೋರಿಸುವುದು ಸಾಮಾನ್ಯ ವಿಷಯವಲ್ಲ. ಆದರೆ ಇದು ಸಾಧ್ಯವಾಗಿದೆ. ಮಲೆನಾಡಿನ ಚಿಕ್ಕಮಗಳೂರು ಹುಡುಗ ಕಿಶನ್,​ ಈ ಮುಂಚೆ ಬಿಗ್​ಬಾಸ್​ ಸೀಸನ್​ 7ರ ಕಂಟೆಸ್ಟೆಂಟ್​ ಆಗಿ ಸಖತ್​ ಸದ್ದು ಮಾಡಿದ್ರು. ಕನ್ನಡಕ್ಕೆ ಕಿಶನ್​ ಏನು ಅನ್ನೋದು ಬಿಗ್​ಬಾಸ್​ ವೇದಿಕೆಯಲ್ಲಿ ತಿಳಿಯಿತು. ಕಿಶನ್​ ಒಬ್ಬ ಸೂಪರ್​ ಡ್ಯಾನ್ಸರ್ ಅನ್ನೋದು ಎಲ್ಲರಿಗೂ ಗೊತ್ತು. ಸಾಕಷ್ಟು ಕಾಂಪಿಟೇಷನ್​ಗಳಲ್ಲಿ ಭಾಗಿಯಾಗಿ ವಿನ್​ ಆಗಿದ್ದಾರೆ.

ಹಿಂದಿಯ ಟಾಪ್​ ಡ್ಯಾನ್ಸ್​ ರಿಯಾಲಿಟಿ ಶೋ ‘ಡ್ಯಾನ್ಸ್​ ದಿವಾನೆ’ ವಿನ್ನರ್​ ಪಟ್ಟವನ್ನು ಕೂಡ ಮುಡಿಗೇರಿಸಿಕೊಂಡಿದ್ರು. ಇದೀಗ ಮತ್ತೆ ಕಿಶನ್​ ಡ್ಯಾನ್ಸ್​ ‘ದಿವಾನೆ ಸೀಸನ್​ 3’ ಮೆಟ್ಟಿಲೇರಿದ್ದಾರೆ. ವಿಶೇಷ ಅಂದ್ರೆ ಕಿಶನ್​ ನಮ್ಮ ಕರ್ನಾಟಕ ಜನ ಮೆಚ್ಚಿದ ಕಲೆ ಯಕ್ಷಗಾನವನ್ನು ಪ್ರದರ್ಶನ ಮಾಡಿದ್ದಾರೆ. ಈ ಡ್ಯಾನ್ಸ್ ನೋಡಿ ಗಣೇಶ್, ಆಚಾರ್ಯ, ನಟ ಗೋವಿಂದ ಖುಷಿಪಟ್ಟಿದ್ದಾರೆ. ತೀರ್ಪುಗಾರರು ಫಿದಾ ಆದರು. ಕನ್ನಡದ ಕಲೆಯನ್ನು ಬಾಲಿವುಡ್ ಜನಕ್ಕೆ ಮತ್ತೊಮ್ಮೆ ನೊಡುವಂತೆ ಮಾಡಿದಕ್ಕೆ ಕಿಶನ್ ಬಗ್ಗೆ ಕನ್ನಡ ಜನರು ಸಂತಸ ಪಟ್ಟಿದ್ದಾರೆ.

- Advertisement -

Related news

error: Content is protected !!