Thursday, April 25, 2024
spot_imgspot_img
spot_imgspot_img

ಮದುವೆಯಾಗಿ 18 ದಿನಕ್ಕೇ ಪತಿಯ ಮನೆಯಲ್ಲಿ ದುರಂತ ಅಂತ್ಯ ಕಂಡ ಯುವತಿ!

- Advertisement -G L Acharya panikkar
- Advertisement -
vtv vitla

ಹಾಸನ: ನೂರಾರು ಕನಸು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವತಿಯೋರ್ವಳು ಮದುವೆಯಾಗಿ ಕೇವಲ 18ದಿನಕ್ಕೇ ಪತಿಯ ಮನೆಯಲ್ಲಿ ದುರಂತ ಅಂತ್ಯ ಕಂಡಿರುವ ಹೃದಯ ವಿದ್ರಾವಕ ಘಟನೆ ಹಾಸನದ ಸಲೀಂ ನಗರ ಎಂಬಲ್ಲಿ ಸಂಭವಿಸಿದೆ. ಮೃತ ಯುವತಿ ಅರಕಲಗೂಡು ತಾಲೂಕಿನ ಹೊಳಲಗೋಡು ಗ್ರಾಮದ ನಿವಾಸಿ ಫಿಜಾ ಖಾನಂ(22) ಎನ್ನಲಾಗಿದೆ.

vtv vitla

ಡಿಸೆಂಬರ್ 2ರಂದು ಫಿಜಾ ಖಾನಂಳಿಗೆ ಹಾಸನದ ಶಾಗಿಲ್ ಅಹ್ಮದ್ ಎಂಬಾತನೊಂದಿಗೆ ಮದುವೆ ನೆರವೇರಿತ್ತು.ಡಿ.19ರಂದು ಮಗಳ ಸಾವಿನ ಸುದ್ದಿ ಕೇಳಿ, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

vtv vitla
vtv vitla

ಇದೀಗ ಪುತ್ರಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಫಿಜಾ ಖಾನಂ ಪೋಷಕರು ಅಳಿಯ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಪುತ್ರಿಯ ಪತಿ ಮನೆಯವರು ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ ಬಾಗಿಲು ಮುಚ್ಚಿ ಕೊಲೆ ಮಾಡಿದ್ದಾರೆ. ವರದಕ್ಷಿಣೆ ತರುವಂತೆ ಕಿರುಕುಳ ಕೊಟ್ಟು ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -

Related news

error: Content is protected !!