Sunday, August 9, 2026
spot_imgspot_img
spot_imgspot_img

ಮನಿ ಲ್ಯಾಂಡರಿಂಗ್ ಆರೋಪ; ಐಎಎಸ್ ಅಧಿಕಾರಿ ಪೂಜಾ ಬಂಧನ; ಕೋಟ್ಯಾಂತರ ರೂ. ವಶಕ್ಕೆ..!

- Advertisement -
- Advertisement -

ನವದೆಹಲಿ​: ಮನಿ ಲ್ಯಾಂಡರಿಂಗ್ ಆರೋಪದಲ್ಲಿ ಜಾರ್ಖಂಡ್‌ನ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರನ್ನು ಜಾರಿ ನಿರ್ದೇಶನಾಲಯವು ಬುಧವಾರ ಬಂಧಿಸಿದೆ.

ಖುಂಟಿ ಜಿಲ್ಲೆಯಲ್ಲಿ ಸುಮಾರು 18 ಕೋಟಿ ಎಂಜಿಎನ್‌ಆರ್‌ಇಜಿಎ ನಿಧಿಯನ್ನು ದುರ್ಬಳಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಾರ್ಖಂಡ್ ಗಣಿ ಕಾರ್ಯದರ್ಶಿ ಪೂಜಾ ಸಿಂಘಾಲ್ ಬಂಧನ ನಡೆದಿದ್ದು, ಬಂಧನಕ್ಕೂ ಮುನ್ನ ಹಲವು ಗಂಟೆಗಳ ಕಾಲ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಜಾರಿ ನಿರ್ದೇಶನಾಲಯವು ಕಳೆದ ಶುಕ್ರವಾರ ಪೂಜಾ ಸಿಂಘಾಲ್ ಮತ್ತು ಅವರ ಕುಟುಂಬ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.

vtv vitla
vtv vitla

ಪರಿಶೀಲನೆ ವೇಳೆ ಎರಡು ಸ್ಥಳಗಳಿಂದ ಒಟ್ಟು 19.31 ಕೋಟಿ ರೂ.ಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪೂಜಾ ಮತ್ತು ಕುಟುಂಬದ ಸಂಪರ್ಕ ಹೊಂದಿರುವ ರಾಂಚಿ ಮೂಲದ ಫೈನಾನ್ಷಿಯಲ್ ಅಡ್ವೈಸರ್ ಅವರಿಗೆ ಸಂಬಂಧಿಸಿದ ಸ್ಥಳದಿಂದ ಸುಮಾರು 17.51 ​​ಕೋಟಿ ರೂ. ಹಾಗೂ ಇನ್ನೊಂದು ಸ್ಥಳದಿಂದ ಸುಮಾರು 1.8 ಕೋಟಿ ರೂ. ನಗದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

- Advertisement -

Related news

error: Content is protected !!