Monday, May 6, 2024
spot_imgspot_img
spot_imgspot_img

ಮನೋಜ್ ಕುಮಾರ್‌ ಕಟ್ಟೆಮಾರ್ ಇವರಿಗೆ “ತುಳುನಾಡ ಐಸಿರಿ” ಬಿರುದು

- Advertisement -G L Acharya panikkar
- Advertisement -

ಬದುಕಿನಲ್ಲಿ ಬಡತನದ ಬಿರುಗಾಳಿ ಬೀಸಿ ಸುತ್ತಕತ್ತಲೆಯ ಛಾಯೆ ಆವರಿಸಿ, ಮನಸಿನಲ್ಲಿ ಸಾವಿರ ನೋವು ತುಂಬಿಕೊಂಡು, ಇನ್ನೇನು ಜೀವನ ಇಷ್ಟೇ ಎಂಬ ವಾಕ್ಯ ಮನದಲ್ಲಿ ಮೂಡಿ, ತನ್ನ ಜೀವ ವೇತ್ಯಜಿಸುವ ಹಂತ, ಏನೋ ಬದಲಾವಣೆ ಜಗದ ನಿಯಮ ಎನ್ನುವ ಹಾಗೆ ಇವರ ಜೀವನದಲ್ಲಿ ಒಂದು ಬದಲಾವಣೆ ಕಂಡಿತು. ಅದೇ ತಾಯಿ ಮಂತ್ರದೇವತೆಯ ಪೂರ್ಣ ಅನುಗ್ರಹ.

ಹೌದು… ಇದು ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಕಟ್ಟೆಮಾರ್ ಎಂಬ ಸಣ್ಣಊರಿನಲ್ಲಿ ನಡೆದ ನೈಜಘಟನೆ. ಶ್ರೀ ಮನೋಜ್‌ಕುಮಾರ್‌ ಇವರು ಜೀವನದಲ್ಲಿ ಸೋತು ಸಂಪೂರ್ಣ ಜಿಗುಪ್ಸೆಗೊಂಡಾಗ ತಾಯಿಯ ಪೂರ್ಣ ಅನುಗ್ರಹದಿಂದ ಮತ್ತೆ ಜೀವನದಲ್ಲಿ ಪುನಶ್ಚೇತನಗೊಂಡು ಇಂದು ಅದೆಷ್ಟೋ ಜನರ ಪಾಲಿಗೆ ಆಶಾಕಿರಣ ಆಗಿದ್ದಾರೆ.

ಕಷ್ಟ ಎಂದು ಬಂದವರ ಕಣ್ಣೀರು ಒರಸಿ, ಸಾಂತ್ವಾನದ ಮಾತು ಹೇಳಿ, ತಾಯಿಯಲ್ಲಿ ಪ್ರಾರ್ಥನೆ ಮಾಡಿ ಅವರ ಬದುಕನ್ನು ಬಂಗಾರ ಮಾಡಿದ ಕೀರ್ತಿಇವರದ್ದು. ಯಾವುದೇ ಜಟಿಲ ಸಮಸ್ಯೆಗಳು ಬಂದರೂ ತಾಯಿ ಮಂತ್ರದೇವತೆಯ ಶಕ್ತಿಯಿಂದ ಪೂರ್ಣಗುಣಮುಖ ಮಾಡಿ ಕಳುಹಿಸುತ್ತಾರೆ. ಸಾವಿರಾರು ಯುವಶಕ್ತಿಗಳನ್ನು ಒಟ್ಟು ಮಾಡಿ ಸಮಾಜದ ಕುಂದು ಕೊರತೆಗಳಿಗೆ ಶೀಘ್ರವಾಗಿ ಸ್ಪಂದಿಸಿ ತನು ಮನ ಧನಗಳಿಂದ ಸಹಾಯ ಹಸ್ತ ನೀಡುವುದು ಇವರ ಬಹುದೊಡ್ಡ ಗುಣ. ಕೊರೊನಾ ಸಮಯದಲ್ಲಿಅದೆಷ್ಟೋ ಅಶಕ್ತರ ಪಾಲಿಗೆ ಆಶಾಕಿರಣವಾಗಿದ್ದಾರೆ. ಹಲವಾರು ಕುಟುಂಬಗಳಿಗೆ ಕ್ಷೇತ್ರದಿಂದಲೇ ಕಿಟ್ ವಿತರಿಸಲಾಗಿದೆ.

ಅರ್ಹ ವ್ಯಕ್ತಿಗೆ ಅರ್ಹಗೌರವ ಎನ್ನುವ ಮಾತಿನಂತೆ ರಾಜಕೇಸರಿ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ೫೧೬ ಸೇವಾ ಯೋಜನೆಯ ಬೃಹತ್‌ ರಕ್ತದಾನ ಶಿಬಿರದಲ್ಲಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ.) ಇವರು ತುಳುನಾಡ ಐಸಿರಿ ಎಂಬ ಬಿರುದು ನೀಡಿ ಗೌರವಿಸಲಿದ್ದಾರೆ. ಮುಂದೆಯೂನಿಮ್ಮ ಈ ಸೇವಾಕಾರ್ಯದಲ್ಲಿ ಯಾವುದೇ ಅಡೆ ತಡೆಗಳು ಬಾರದೆ ಸಾಧನೆಯ ಉನ್ನತ ಶಿಖರ ಏರಿ ಶ್ರೇಷ್ಟ ಗೌರವಗಳು ನಿಮ್ಮದಾಗಲಿ ಎಂದು ವಿ ಟಿ.ವಿ ಬಳಗದಿಂದ ಸದಾ ಹಾರೈಸುತ್ತೇವೆ.

- Advertisement -

Related news

error: Content is protected !!