Friday, August 7, 2026
spot_imgspot_img
spot_imgspot_img

ಮಲ್ಪೆ ಕಡಲ ತೀರದಲ್ಲಿ ಸಮುದ್ರ ಪಾಲಾದ ಯುವತಿ, ಮೂವರ ರಕ್ಷಣೆ

- Advertisement -
- Advertisement -

ಉಡುಪಿ: ಮಲ್ಪೆ ಕಡಲ ತೀರದಲ್ಲಿ ಯುವತಿಯೋರ್ವಳು ಸಮುದ್ರ ಪಾಲಾದ ಘಟನೆ ನಡೆದಿದೆ.

ಕೊಡಗು ಮೂಲದ ಮೂವರು ಯುವತಿಯರು ಹಾಗೂ ಓರ್ವ ಯುವಕ ಮಲ್ಪೆ ಬೀಚ್ ಗೆ ಬಂದು, ನೀರಿನಲ್ಲಿ ಆಟವಾಡುತ್ತಿದ್ದರು. ಸ್ಥಳೀಯರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಇವರು ಕೇಳದೆ, ನೀರಿಗಿಳಿದಿದ್ದಾರೆ.

ನಾಲ್ಕು ಮಂದಿಯ ಪೈಕಿ ಒರ್ವ ಯುವತಿ ನಾಪತ್ತೆಯಾಗಿದ್ದು, ಉಳಿದವರನ್ನು ಸ್ಥಳೀಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!