Thursday, September 3, 2026
spot_imgspot_img
spot_imgspot_img

ಮಲ್ಪೆ: ಬೀಚ್ ನಲ್ಲಿ ಮುಳುಗಡೆಯಾಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

- Advertisement -
- Advertisement -

ಮಲ್ಪೆ: ಮಲ್ಪೆ ಬೀಚ್ ನಲ್ಲಿ ಇಬ್ಬರು ಪ್ರವಾಸಿಗರು ಮುಳುಗಡೆಯಾಗುತ್ತಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ.

ಇಬ್ಬರು ಪ್ರವಾಸಿಗರು ಮೈಸೂರಿನಿಂದ ಬೀಚಿಗೆ ಬಂದಿದ್ದು, ಮೊದಲ ಪ್ರಕರಣದಲ್ಲಿ ತೌಸೀಫ್ ಎಂಬವರು ಈಜಲೆಂದು ನೀರಿಗಿಳಿದಿದ್ದರು. ಇವರು ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಸಂದರ್ಭ ರಕ್ಷಿಸಲಾಯಿತು.

ಇನ್ನೊಂದು ಪ್ರಕರಣದಲ್ಲಿ ಮೈಸೂರಿನಿಂದ ಬಂದಿದ್ದ ಅಬ್ರಾರ್ ಅಹ್ಮದ್ ಎಂಬವರು ಇದೇ ರೀತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾಗ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ತೀವ್ರವಾಗಿ ಅಸ್ವಸ್ಥಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

- Advertisement -

Related news

error: Content is protected !!