Monday, June 15, 2026
spot_imgspot_img
spot_imgspot_img

ಮಲ್ಪೆ : ಬೋಟ್‌ನಿಂದ ಬಿದ್ದು ಮೀನುಗಾರ ಮೃತ್ಯು

- Advertisement -
- Advertisement -

ಮಲ್ಪೆ : ಮೀನುಗಾರಿಕೆಯಲ್ಲಿ ನಡೆಸುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ಆಕಸ್ಮಿಕವಾಗಿ ಬೋಟ್‌ಗೆ ಬಿದ್ದು ಗಂಭೀರ ಗಾಯಗೊಂಡ ಮೀನುಗಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮೃತರನ್ನು ಭಟ್ಕಳದ ಬೈಲೂರಿನ ಬಾವಿಹಿತ್ಲು ನಿವಾಸಿ ನಾಗರಾಜನ್(27) ಎಂದು ಗುರುತಿಸಲಾಗಿದೆ. ನಾಗರಾಜನ್ ಮಲ್ಪೆ ಬಂದರಿನಲ್ಲಿ ಪ್ರತಾಪ್ ಸುವರ್ಣ ಮಾಲೀಕತ್ವದ ಶ್ರೀಕೃಷ್ಣ ಚಕ್ರ ಲೈಲ್ಯಾಂಡ್ ಮೀನುಗಾರಿಕಾ ಬೋಟ್ ನಲ್ಲಿ ಕಲಾಸಿಯಾಗಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು.

ಅರಬ್ಬೀ ಸಮುದ್ರದ 200 ನಾಟಿಕಲ್ ದೂರದಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದಾಗ, ಮುಂಜಾನೆ 05:45 ರ ವೇಳೆಗೆ ಸಮುದ್ರದ ಅಲೆಗಳ ಅಬ್ಬರಕ್ಕೆ ಬೋಟ್ ಅಲುಗಾಡಿ ಮೀನುಗಾರಿಕೆ ಕೆಲಸ ಮಾಡುತಿದ್ದ ನಾಗರಾಜನ್ ಆಕಸ್ಮಿಕವಾಗಿ ಆಯತಪ್ಪಿ ಬೋಟಿನ ಬಲೆ ಎಳೆಯುವ ಡ್ರಮ್ ವಿಂಚ್ ಗೆ ಬಿದ್ದು ಡ್ರಮ್ ವಿಂಚ್ ಆತನ ತಲೆಯ ಹಿಂಬದಿಗೆ ತಾಗಿ ತೀವ್ರ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ ಎಂದು ದೂರು ದಾಖಲಾಗಿದೆ.

- Advertisement -

Related news

error: Content is protected !!