Tuesday, May 7, 2024
spot_imgspot_img
spot_imgspot_img

ಮಲ್ಪೆ: ಬೋಟ್ ನಲ್ಲಿ ಸಿಲುಕಿಕೊಂಡ 250 ಕೆಜಿ ತೂಕದ ಗರಗಸ ಮೀನು

- Advertisement -G L Acharya panikkar
- Advertisement -

ಉಡುಪಿ: ಮಲ್ಪೆ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಗರಗಸ ಮೀನೊಂದು ಬೋಟ್ ನಲ್ಲಿ ಸಿಲುಕಿಕೊಂಡಿದೆ.

ಈ ಮೀನಿನ ತೂಕ ಸುಮಾರು 250 ಕೆಜಿ ಇದ್ದು, ಮೀನನ್ನು ನೋಡಲೆಂದು ಹಾರ್ಬರ್ ನೊಳಗೆ ಹಲವಾರು ಮಂದಿ ಸೇರಿದ್ದರು. ಬಳಿಕ ಕ್ರೈನ್ ನ ಸಹಾಯದಿಂದ ಬೋಟ್ ನಿಂದ ಮೀನನ್ನು ಮೇಲಕೆತ್ತಿ ಲಾರಿಯಲ್ಲಿ ತುಂಬಿಸಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು ಎಂದು ತಿಳಿದು ಬಂದಿದೆ.

ಈ ಜಾತಿಯ ಮೀನುಗಳು ಸಮುದ್ರದಲ್ಲಿ ಉಷ್ಣವಲಯ ಮತ್ತು ಉಪೋಷ್ಣವಲಯದಲ್ಲಿ ವಾಸಿಸುತ್ತವೆ ಎನ್ನಲಾಗಿದೆ.

vtv vitla
vtv vitla
- Advertisement -

Related news

error: Content is protected !!