Wednesday, April 24, 2024
spot_imgspot_img
spot_imgspot_img

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

- Advertisement -G L Acharya panikkar
- Advertisement -

ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಸಂಪನ್ಮೂಲ ವ್ಯಕ್ತಿ ವಿಜೇಶ್ ಬಿಳಿನೆಲೆ ಮಾತನಾಡಿ ಯೋಗವು ವಿಶ್ವಕ್ಕೆ ಭಾರತೀಯರ ಕೊಡುಗೆಯಾಗಿದೆ. ದಿನದ ಒಂದು ಅವಧಿಯಲ್ಲಿ ಮಾಡುವ ಯೋಗವು ಆ ದಿನವನ್ನು ಬದಲಾಯಿಸುತ್ತದೆ . ಯೋಗದಿಂದ ಜ್ಞಾನ ಸಂಪಾದನೆ ಸಾಧ್ಯ ಎಂದರು. ಕೆಲವು ಆಸನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ನಿರ್ದೇಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಚಾಲಕ ಜೆ ಪ್ರಹ್ಲಾದ್ ಶೆಟ್ಟಿ ಯೋಗವು ವಿದ್ಯಾರ್ಥಿಗಳ ದೈನಿಕ ಚಟುವಟಿಕೆ ಎಂದು ಭಾವಿಸಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದರು. ಆಡಳಿತಾಧಿಕಾರಿ ರವೀಂದ್ರ .ಡಿ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನೂ ಕಾಪಾಡುವಲ್ಲಿ ಯೋಗವು ಪ್ರಮುಖ ಪಾತ್ರವಹಿಸುತ್ತದೆ ಎಂದರು. ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ.ವಿ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿಯರಾದ ವಿಶಾಲಾಕ್ಷಿ, ಅಶ್ವಿನಿ, ಕಾರ್ಯಕ್ರಮ ನಿರೂಪಿಸಿ, ಶ್ರುತಿ ವಂದಿಸಿದರು.

- Advertisement -

Related news

error: Content is protected !!