Monday, April 29, 2024
spot_imgspot_img
spot_imgspot_img

ಮಾರ್ಚ್​ 25ರಂದು ಯೋಗಿ ಆದಿತ್ಯನಾಥ್​ ಪ್ರಮಾಣ ವಚನ ಸ್ವೀಕಾರ; ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ಭಾಗಿ

- Advertisement -G L Acharya panikkar
- Advertisement -

ಉತ್ತರಪ್ರದೇಶದಲ್ಲಿ ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಿರುವ ಮೂಲಕ ದಾಖಲೆ ನಿರ್ಮಿಸಿದ ಯೋಗಿ ಆದಿತ್ಯನಾಥ್​​ ಮಾರ್ಚ್​ 25ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಯೋಗಿ ಆದಿತ್ಯನಾಥ್​ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರದ ಇತರ ಪ್ರಮುಖ ಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

vtv vitla
vtv vitla

ಯೋಗಿ ಆದಿತ್ಯನಾಥ್​ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ, ಲಖನೌದಲ್ಲಿರುವ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಮಾರ್ಚ್​ 25 (ಶುಕ್ರವಾರ) ಸಂಜೆ 4ಗಂಟೆಯ ಹೊತ್ತಿಗೆ ನಡೆಯಲಿದ್ದು, ಸುಮಾರು 50 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಾಗೇ, 200 ವಿವಿಐಪಿಗಳು ಇರಲಿದ್ದಾರೆ ಎಂದೂ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅದಕ್ಕಾಗಿ ಸಕಲ ಸಿದ್ಧತೆಗಳೂ ನಡೆಯುತ್ತಿವೆ.

vtv vitla
vtv vitla
- Advertisement -

Related news

error: Content is protected !!