Thursday, May 2, 2024
spot_imgspot_img
spot_imgspot_img

ಮುಂಬೈನ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಬಂಧನ; ಕರ್ನಾಟಕ ಪೊಲೀಸರ ಭರ್ಜರಿ ಕಾರ್ಯಾಚರಣೆ

- Advertisement -G L Acharya panikkar
- Advertisement -

ಕರ್ನಾಟಕ ಪೊಲೀಸರು ಮಂಗಳವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಮುಂಬೈ ದರೋಡೆಕೋರರಲ್ಲಿ ಒಬ್ಬನಾದ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಇಲಿಯಾಸ್ ಅಬ್ದುಲ್ ಆಸಿಫ್‌ನನ್ನು ಬಂಧಿಸಿದ್ದಾರೆ.

ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ ಸೇರಿದಂತೆ ಒಟ್ಟು 37 ಪ್ರಕರಣದ ಆರೋಪಿಯಾಗಿದ್ದ ಇಲಿಯಾಸ್ ಅಬ್ದುಲ್ ಆಸಿಫ್‌ನ ಪತ್ತೆಗಾಗಿ ಮುಂಬೈ ಪೊಲೀಸರು ಶೋಧ ನಡೆಸುತ್ತಿದ್ದರು. ಬೆಂಗಳೂರು ಗ್ರಾಮಾಂತರ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ವಂಶಿಕೃಷ್ಣ, ಹೆಚ್ಚುವರಿ ಎಸ್‌ಪಿ ಲಕ್ಷ್ಮಿ ಗಣೇಶ್‌, ಆನೇಕಲ್‌ ಉಪ ಎಸ್‌ಪಿ ಎಂ.ಮಲ್ಲೇಶ್‌ ನೇತೃತ್ವದ ತಂಡ ಖಾಸಗಿ ರೆಸ್ಟೋರೆಂಟ್‌ನಲ್ಲಿ ತಂಗಿರುವ ಆರೋಪಿಯ ಬಗ್ಗೆ ಮಾಹಿತಿ ಪಡೆದು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.

ಬಂಧನದ ವೇಳೆ ಆರೋಪಿಯು ಲೋಡ್ ಗನ್ ಹಿಡಿದಿದ್ದರು ಆತನನ್ನು ಬಂಧಿಸುವಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯಿಂದ ನಾಲ್ಕು ಗುಂಡುಗಳು, ಒಂದು ಪಿಸ್ತೂಲ್, 15 ಸಿಮ್ ಕಾರ್ಡ್‌ಗಳು ಮತ್ತು ಆರು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಂಬೈನ ಕಚೇರಿಯಲ್ಲಿ ಉದ್ಯಮಿ ಸಿಕಂದರ್ ರಾಜು ಲುಲಾಡಿಯಾ ಅವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯೂ ಇತನಾಗಿದ್ದು, ಮುಂಬೈ ಪೊಲೀಸರು ನಗರ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಆತನ ಹುಡುಕಾಟ ನಡೆಸುತ್ತಿರುವುದರಿಂದ ಆರೋಪಿ ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದಾನೆ.

- Advertisement -

Related news

error: Content is protected !!