Saturday, April 20, 2024
spot_imgspot_img
spot_imgspot_img

ಮುಸ್ಲಿಂ ಧಾರ್ಮಿಕ ಗುರುಗಳನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

- Advertisement -G L Acharya panikkar
- Advertisement -
vtv vitla

ಮಹಾರಾಷ್ಟ್ರ: ಅಫ್ಘಾನಿಸ್ತಾನದ 35 ವರ್ಷದ ಮುಸ್ಲಿಂ ಆಧ್ಯಾತ್ಮಿಕ ಗುರುವನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ನಾಲ್ವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ.

ಸ್ಥಳೀಯವಾಗಿ ಸೂಫಿ ಬಾಬಾ ಎಂದೇ ಜನಪ್ರಿಯರಾಗಿದ್ದ ಖ್ವಾಜಾ ಸೈಯದ್ ಚಿಶ್ತಿಯ ತಲೆಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಹಂತಕರು ಸೈಯದ್ ಚಿಶ್ತಿ ಅವರ ವಾಹನದಲ್ಲಿಯೇ ಪರಾರಿಯಾಗಿರುವುದ್ದಾರೆ.

ಸೈಯದ್ ಚಿಶ್ತಿಯ ವಾಹನ ಚಾಲಕ ಪ್ರಮುಖ ಕೊಲೆ ಆರೋಪಿ ಎಂದು ಶಂಕಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಸೈಯದ್ ಚಿಶ್ತಿ ನಾಸಿಕ್ ನ ಯೆಯೋಲಾ ನಗರದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವುದಾಗಿ ತಿಳಿಸಿದ್ದಾರೆ. ಬಾಬಾ ಹತ್ಯೆಯ ಹಿಂದೆ ಯಾವುದೇ ಧಾರ್ಮಿಕ ಉದ್ದೇಶ ಇಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸಾಕ್ಷಿಗಳ ಹೇಳಿಕೆ ಆಧಾರದಲ್ಲಿ ಸೈಯದ್ ಚಿಶ್ತಿಯ ಚಾಲಕನ ವಿರುದ್ಧ ಎಫ್ ಐಆರ್ ದಾಖಲಿಸಿದ್ದು, ಶಂಕಿತರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸೈಯದ್ ಚಿಶ್ತಿಯ ಕೊಲೆಗೆ ಕಾರಣ ಏನೆಂದು ಈವರೆಗೆ ತಿಳಿದು ಬಂದಿಲ್ಲ. ಅಫ್ಘಾನಿಸ್ತಾನದ ಪ್ರಜೆಯಾದ ಹಿನ್ನೆಲೆಯಲ್ಲಿ ನಾಸಿಕ್ ನಲ್ಲಿ ಭೂಮಿ ಖರೀದಿಸಲು ಸಾಧ್ಯವಾಗದ ಪರಿಣಾಮ ಸ್ಥಳೀಯ ಜನರ ಸಹಾಯದಿಂದ ಚಿಶ್ತಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಪಾಟೀಲ್ ತಿಳಿಸಿದ್ದಾರೆ.

- Advertisement -

Related news

error: Content is protected !!