Friday, April 26, 2024
spot_imgspot_img
spot_imgspot_img

ಮೂರಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ; ಒಂದೇ ಕುಟುಂಬದ ನಾಲ್ವರು ದುರ್ಮರಣ!

- Advertisement -G L Acharya panikkar
- Advertisement -

ದೆಹಲಿ: ಇಲ್ಲಿನ ಹಳೇ ಸೀಮಾಪುರಿ ಏರಿಯಾದಲ್ಲಿರುವ ಬಹುಅಂತಸ್ತಿನ ಕಟ್ಟಡವೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇವರೆಲ್ಲ ಹೊಗೆಯಿಂದ ಉಸಿರುಕಟ್ಟಿ ಮೃತಪಟ್ಟಿದ್ದಾರೆ. ಹಳೇ ಸೀಮಾಪುರಿ ಏರಿಯಾದಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಕೊನೇ ಅಂತಸ್ತು ಅಂದರೆ ಮೂರನೇ ಅಂತಸ್ತಿನಲ್ಲಿ ಇಂದು ಮುಂಜಾನೆ ಬೆಂಕಿ ಹೊತ್ತಿಕೊಂಡಿತ್ತು.

ಮೃತರು ಹೌರಿ ಲಾಲ್​, ರೀನಾ, ಅಶು ಮತ್ತು ರಾಧಿಕಾರ ಎಂದು ತಿಳಿದುಬಂದಿದೆ. ಹೌರಿ ಲಾಲ್​ 59 ವರ್ಷದವರಾಗಿದ್ದು, ಶಾಸ್ತ್ರಿ ಭವನ್​​ನಲ್ಲಿ ಫ್ಯೂನ್​ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ರೀನಾ ಕಸಗುಡಿಸುವ ಕೆಲಸದವರಾಗಿದ್ದರು. ಅಶು ಮತ್ತು ರಾಧಿಕಾರ ಅವರ ಮಕ್ಕಳಾಗಿದ್ದಾರೆ. ಇಂದು ಮುಂಜಾನೆ ಸುಮಾರು 4.7ಗಂಟೆ ಹೊತ್ತಿಗೆ ಅಗ್ನಿಶಾಮಕದಳದವರಿಗೆ ಕರೆ ಹೋಗಿದೆ. ಅವರು ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

- Advertisement -

Related news

error: Content is protected !!