Wednesday, July 29, 2026
spot_imgspot_img
spot_imgspot_img

ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಮುಂಬೈ: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಕ್ವಾರಿಯ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಮೀರಾ ಗಾಯಕ್ವಾಡ್ (55), ಸೊಸೆ ಅಪೇಕ್ಷಾ (30) ಮತ್ತು ಮೊಮ್ಮಕ್ಕಳಾದ ಮಯೂರೇಶ್ (15), ಮೋಕ್ಷ (13) ಮತ್ತು ನೀಲೇಶ್ (15) ಮೃತ ದುರ್ದೈವಿಗಳು.

ಡೊಂಬಿವಲಿ ಬಳಿಯ ಸಂದಪ್ ಗ್ರಾಮದಲ್ಲಿ ಕಾಲು ಜಾರಿ ನೀರಿಗೆ ಬಿದ್ದ ಒಂದು ಮಗುವನ್ನು ರಕ್ಷಿಸಲು ಕುಟುಂಬ ಸದಸ್ಯರು ಕ್ವಾರಿಗೆ ಹಾರಿದ್ದು, ಈ ವೇಳೆ ದುರಂತ‌ ನಡೆದಿದೆ‌ ಎಂದು ವರದಿಯಾಗಿದೆ.

ನೀರಿನ ಅಭಾವದಿಂದ ಕುಟುಂಬ ಬಟ್ಟೆ ಒಗೆಯಲು ಕ್ವಾರಿಗೆ ತೆರಳಿತ್ತು. ಈ ವೇಳೆ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ‌.

- Advertisement -

Related news

error: Content is protected !!