Monday, May 6, 2024
spot_imgspot_img
spot_imgspot_img

ಮೂಸಂಬಿ ಜ್ಯೂಸ್​ ಆರೋಗ್ಯಕ್ಕೆ ಉತ್ತಮ; ವಾರಕ್ಕೆ ಎರಡು ಬಾರಿಯಾದರೂ ಮೂಸಂಬಿ ಜ್ಯೂಸ್​ ಸವಿಯಿರಿ

- Advertisement -G L Acharya panikkar
- Advertisement -
suvarna gold

ಸಾಮಾನ್ಯವಾಗಿ ಬಾಯಾರಿಕೆಯಾದಾಗ ಮೂಸಂಬಿ ಜ್ಯೂಸ್ ಮಾಡಿ ಸವಿಯುತ್ತೇವೆ. ದೇಹವನ್ನು ತಂಪಾಗಿಸುವ ಈ ಹಣ್ಣು ವಿಟಮಿನ್ ಸಿ ಮತ್ತು ಪೊಟ್ಯಾಶಿಯಂನಿಂದ ಸಮೃದ್ಧವಾಗಿದೆ. ತಾಜಾ ಹಣ್ಣಾಗಿದ್ದು, ಹೆಚ್ಚು ರುಚಿಕರವಾಗಿರುತ್ತದೆ. ಕೆಲವು ಔಷಧೀಯ ಗುಣಗಳನ್ನೂ ಸಹ ಹೊಂದಿದೆ. ಮೂಸಂಬಿ ಜ್ಯೂಸ್​ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.

ಮೂಸಂಬಿ ರಸದ ಆರೋಗ್ಯ ಪ್ರಯೋಜನಗಳು
ಜೀರ್ಣಕ್ರಿಯೆ

ಮೂಸಂಬಿಯಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುವ ಫ್ಲೇವೊನೈಡ್ಗಳಿವೆ. ಮೊಸಂಬಿ ಜ್ಯೂಸ್ ಸೇವನೆಯಿಂದ ಅಜೀರ್ಣ ಮತ್ತು ಗ್ಯಾಸ್ಟಿಕ್ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದು ಮಲಬದ್ಧತೆಗೆ ಕಾರಣವಾಗುವ ಹಾನಿಕಾರಕ ಜೀವಾಣುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಮೂಸಂಬಿ ಜ್ಯೂಸ್ ಜತೆಗೆ ಒಂದು ಚಿಟಿಕೆ ಉಪ್ಪು ಮಿಶ್ರಣ ಮಾಡಿ ಸೇವಿಸುವುದು ಉತ್ತಮ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಮೂಸಂಬಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಮೊಸಂಬಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

vtv vitla
vtv vitla

ಉಸಿರಾಟ ಸಮಸ್ಯೆಗೆ ಪರಿಹಾರ ನೀಡುತ್ತದೆ
ಮೂಸಂಬಿಯಲ್ಲಿ ಶೀತ, ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಜತೆಗೆ ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ಮೂಸಂಬಿ ಜ್ಯೂಸ್ ಜತೆಗೆ ಜೇನುತುಪ್ಪ ಮತ್ತು ನೀರು ಸೇರಿಸಿ ಬೆಳಿಗ್ಗೆ ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಆರೋಗ್ಯಕ್ಕೆ ಹೆಚ್ಚು ಉಪಕಾರಿ.

ಮೂಸಂಬಿಯಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದ್ದು ಇದು ಸೋಂಕನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಜತೆಗೆ ಮೂತ್ರಪಿಂಡ ಆರೋಗ್ಯವನ್ನು ಕಾಪಾಡುತ್ತದೆ. ನಿಮ್ಮ ಯಕೃತ್ತಿನ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಕಾಮಾಲೆ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ. ನಿಮ್ಮ ಆರೋಗ್ಯದ ಜತೆಗೆ ತಲೆ ಕೂದಲು ಮತ್ತು ಚರ್ಮದ ಆರೋಗ್ಯವನ್ನೂ ಸಹ ಸುಧಾರಿಸುತ್ತದೆ.

vtv vitla
vtv vitla
- Advertisement -

Related news

error: Content is protected !!