Saturday, June 6, 2026
spot_imgspot_img
spot_imgspot_img

ಮೆಹಂದಿ ದಿನವೇ ಕುಸಿದು ಬಿದ್ದು ಯುವತಿ ಮೃತ್ಯು

- Advertisement -
- Advertisement -
vtv vitla

ತಿರುವನಂತಪುರಂ: ಮದುವೆಯ ಮುನ್ನ ದಿನ ವಧುವೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಲಪ್ಪುರಂನ ಪೆರಿಂತಲ್ಮನ್ನಾನಲ್ಲಿ ನಡೆದಿದೆ.

ಪಾತೈಕ್ಕರ ಶಾಲೆಪಾಡಿ ಕಿಜಕ್ಕೆತ್ತಿಲ್‌ನ ಮುಸ್ತಫಾ – ಜೇನತ್ ದಂಪತಿಯ ಪುತ್ರಿ ಫಾತಿಮಾ ಬಾತೂರ್‌‌ (19) ಮೃತ ಯುವತಿ.

ಫಾತಿಮಾ ಅವರ ಮದುವೆ ಶನಿವಾರ (ಜ.14 ರಂದು) ಮೂಲ್ಕಿನಾಡ್‌ನಲ್ಲಿ ನಿಶ್ಚಯವಾಗಿತ್ತು, ಶುಕ್ರವಾರ ಸಂಜೆ ಮೆಹಂದಿ ಸಂಭ್ರಮದಲ್ಲಿದ್ದ ವೇಳೆ ಇದ್ದಕ್ಕಿದ್ದಂತೆ ಫಾತಿಮಾ ಕುಸಿದು ಬಿದ್ದಿದ್ದಾರೆ. ಮೆಹಂದಿ ಸಮಾರಂಭದಲ್ಲಿ ಫೋಟೋ ತೆಗೆಯುವ ವೇಳೆ ಪಾತಿಮಾ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಮಗಳನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ

- Advertisement -

Related news

error: Content is protected !!