- Advertisement -
- Advertisement -

ಕ್ರಿಸ್‌ಮಸ್ ಸಂತನ ವೇಷ ತೊಟ್ಟು ಕಾಂತಾರ ಸಿನಿಮಾದ ಹಾಡಿಗೆ ಪಂಜುರ್ಲಿ ದೈವವನ್ನು ಅಣಿಕಿಸುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು , ಹಿಂದೂಗಳ ಧಾರ್ಮಿಕ ನಂಬಿಕೆಗೆ ಅಪಮಾನ ಮಾಡಿದ್ದಾರೆ ಎಂಬ ಆಕ್ರೋಶ ಕೇಳಿ ಬರುತ್ತಿದೆ.
ಕ್ರಿಸ್‌ಮಸ್ ವೇಳೆಯಲ್ಲಿ ಸಾಂತಾಕ್ಲಾಸ್ ವೇಷ ತೊಟ್ಟು ಮನೆಮನೆಗೆ ಭೇಟಿ ನೀಡುವ ಸಂದರ್ಭದ ವಿಡಿಯೋ ಇದಾಗಿದ್ದು, ಕಾಂತಾರ ಸಿನಿಮಾದ ದೃಶ್ಯದಂತೆ ಪಂಜುರ್ಲಿ ದೈವವನ್ನು ಅನುಕರಣೆ ಮಾಡಿ ಹುಚ್ಚಾಟ ಮೆರೆದಿದ್ದಾರೆ.

ಹಿಂದೂ ಸಂಸ್ಕೃತಿಯ ಧಾರ್ಮಿಕ ಆಚರಣೆಗಳನ್ನು ಈ ರೀತಿ ತಮಾಷೆ ಮಾಡಿ ಅವಹೇಳನ ಮಾಡೋದು ಎಷ್ಟು ಸರಿ..? ಇನ್ನೊಬ್ಬರ ಆಚಾರ-ವಿಚಾರಗಳಿಗೆ ಅಪಹಾಸ್ಯ ಮಾಡೋದು ತಪ್ಪಲ್ವ..? ಒಂದು ಸಿನಿಮಾ ಇವಕ್ಕೆಲ್ಲಾ ಕಾರಣವಾಯಿತೇ..? ಅಥವಾ ಜನರ ಹುಚ್ಚುತನವೇ..? ಇನ್ನೊಂದು ಧರ್ಮವನ್ನು ಕೀಳಾಗಿ ನೋಡೋದು ಜನರಿಗೆ ಪರಿಪಾಟವಾಯಿತೇ..? ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
- Advertisement -








