Friday, May 10, 2024
spot_imgspot_img
spot_imgspot_img

ರಕ್ತವನ್ನು ಶುದ್ಧೀಕರಿಸುವ ಪರಿಣಾಮಕಾರಿ ಕ್ರಮಗಳು

- Advertisement -G L Acharya panikkar
- Advertisement -

ನಮ್ಮ ದೇಹದಾದ್ಯಂತ ಹಾರ್ಮೋನುಗಳಿಗೆ ಆಮ್ಲಜನಕವನ್ನು ರವಾನಿಸುವಲ್ಲಿ ರಕ್ತವು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಿದ್ದಾಗ ರಕ್ತ ಅಶುದ್ಧ ಅಥವಾ ವಿಷಕಾರಿಯಾದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ರಕ್ತವನ್ನು ಶುದ್ಧವಾಗಿಡಲು ಉತ್ತಮ ಜೀವನಶೈಲಿ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅದರಂತೆ ಕೆಲವು ಆಹಾರಗಳ ಸೇವನೆ ಮಾಡುವ ಮೂಲಕ ರಕ್ತದ ಕಲ್ಮಶವನ್ನು ತೆಗೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಇದರ ಬಗ್ಗೆ ತಿಳಿದುಕೊಳ್ಳೋಣ.

ರಕ್ತವನ್ನು ಶುದ್ಧವಾಗಿ ಮತ್ತು ತ್ಯಾಜ್ಯದಿಂದ ಮುಕ್ತವಾಗಿಡಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು. ನೀರು ಕುಡಿಯುವುದರಿಂದ ಕಿಡ್ನಿ ಕಾರ್ಯ ಸುಲಭವಾಗುತ್ತದೆ. ನೀರು ನಿಮ್ಮ ರಕ್ತನಾಳಗಳನ್ನು ತೆರೆಯಲು ಸಹಾಯ ಮಾಡುತ್ತದೆ ಇದರಿಂದ ರಕ್ತವು ಉತ್ತಮವಾಗಿ ಪರಿಚಲನೆಯಾಗುತ್ತದೆ.

ರಕ್ತ ಶುದ್ಧೀಕರಣಕ್ಕೆ ಪ್ರಯೋಜನಕಾರಿಯಾಗುವ ಆಹಾರಗಳಲ್ಲಿ ಸೇಬು ಕೂಡ ಒಂದು. ಸೇಬುಗಳು ಪೆಕ್ಟಿನ್ ಎಂದು ಕರೆಯಲ್ಪಡುವ ಹೆಚ್ಚಿನ ಪ್ರಮಾಣದ ಕರಗುವ ಫೈಬರ್ ಅನ್ನು ಹೊಂದಿರುತ್ತವೆ. ಕರಗುವ ಫೈಬರ್ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಾಫಿ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ ಎಂದು ಅಧ್ಯಯನಗಳಲ್ಲಿ ಕಂಡುಬಂದಿದೆ. ಉತ್ತಮ ಯಕೃತ್ತಿನ ಕಾರ್ಯವನ್ನು ನಿರ್ವಹಿಸುವಲ್ಲಿ ಮಧ್ಯಮ ಪ್ರಮಾಣದ ಕೆಫೀನ್ ಸಹ ಪ್ರಯೋಜನಕಾರಿಯಾಗಿದೆ. ಆದಾಗ್ಯೂ ಕಾಫಿಯನ್ನು ಮಿತವಾಗಿ ಮಾತ್ರ ಸೇವಿಸಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಇದರ ಅತಿಯಾದ ಸೇವನೆಯು ಹಾನಿಕಾರಕವಾಗಬಹುದು.

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 8-10 ಬೇವಿನ ಎಲೆಗಳನ್ನು ಸೇವಿಸುವುದು ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಬೇವಿನ ಎಲೆಗಳು ರಕ್ತದ ಕಲ್ಮಶಗಳನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ. ಇದರ ಸೇವನೆಯು ಮೊಡವೆ, ಎಸ್ಜಿಮಾ ಮತ್ತು ದದ್ದುಗಳಂತಹ ಚರ್ಮದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ರಕ್ತ ಶುದ್ಧಿಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

- Advertisement -

Related news

error: Content is protected !!