Tuesday, September 1, 2026
spot_imgspot_img
spot_imgspot_img

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ, ಕೇವಲ ಊಹಾಪೋಹ; ಇಂಧನ ಸಚಿವ ವಿ.ಸುನೀಲ್​ ಕುಮಾರ್

- Advertisement -
- Advertisement -
driving

ದಾವಣಗೆರೆ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಮತ್ತು ಕಲ್ಲಿದ್ದಲು ಅಭಾವ ಆಗೋದಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು.. ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗದಂತೆ ರಾಜ್ಯದಲ್ಲಿ ಎಲ್ಲ ರೀತಿಯ ಎಚ್ಚರಿಕೆ ವಹಿಸಲಾಗಿದೆ.

ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗುತ್ತೆ ಅನ್ನೋದು ಉಹಾಪೋಹ. ರಾಯಚೂರು-ಬಳ್ಳಾರಿ ಘಟಕದಲ್ಲಿ ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆ ಇಲ್ಲ. ಕೇಂದ್ರ ಸರ್ಕಾರ ಈಗಾಗಲೇ 8 ರೇಕ್ಸ್ ಕಲ್ಲಿದ್ದಲು ಕಳುಹಿಸಿಕೊಟ್ಟಿದೆ. ನವೆಂಬರ್ ಅಂತ್ಯದಲ್ಲಿ ಇನ್ನೆರಡು ರೇಕ್ಸ್ ಹೆಚ್ಚು ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಸುನೀಲ್​ ಕುಮಾರ್ ತಿಳಿಸಿದರು.

- Advertisement -

Related news

error: Content is protected !!