Friday, August 28, 2026
spot_imgspot_img
spot_imgspot_img

ರಾಜ್ಯಾದ್ಯಂತ ಆರ್​ಟಿಓ ಚೆಕ್​ ಪೋಸ್ಟ್​ಗಳ ಮೇಲೆ ಬೆಳ್ಳಂಬೆಳ್ಳಗೆ ಲೋಕಾಯುಕ್ತ ದಾಳಿ; ಒಂದೂವರೆ ಲಕ್ಷ ರೂ. ಪತ್ತೆ

- Advertisement -
- Advertisement -

ಬೆಂಗಳೂರು: ವಾಹನ ಸವಾರರಿಂದ ಹಣ ವಸೂಲಿ ಕುರಿತು ದೂರು ಹಿನ್ನೆಲೆ ರಾಜ್ಯದ ಹಲವೆಡೆ RTO ಚೆಕ್ ​ಪೋಸ್ಟ್​ಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಬೆಂಗಳೂರು ಹೊರವಲಯದಲ್ಲಿನ ಅತ್ತಿಬೆಲೆ, ಬೀದರ್ ಜಿಲ್ಲೆಯ ಹುಮ್ನಾಬಾದ್​​, ಬಳ್ಳಾರಿಯ ಹಗರಿ RTO ಚೆಕ್​ ಪೋಸ್ಟ್ ಮೇಲೂ ದಾಳಿ ಮಾಡಲಾಗಿದೆ.

ಬೀದರ್, ಕಲ್ಬುರ್ಗಿ ಎಸ್ಪಿ ಪಿ.ಕರ್ನೂಲ್ ನೇತೃತ್ವದ ತಂಡದಿಂದ ಬೆಳಗ್ಗೆ ನಾಲ್ಕು ಗಂಟೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಚೇಕ್ ಪೋಸ್ಟ್​ನಲ್ಲಿ ಒಂದೂವರೆ ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಪತ್ತೆಯಾದ ಹಣ ದಂಡ ಹಾಕಿದ್ದೋ ಅಥವಾ ಲಂಚದ ಹಣವೋ ಎಂದು ಅಧಿಕಾರಿಗಳು ಪರೀಲನೆಗೆ ತೊಡಗಿದ್ದಾರೆ. ​ಆರ್​ಟಿಓ ಅಧಿಕಾರಿ ಹೇಮಂತ ಎನ್ನುವವರ ಬಳಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

- Advertisement -

Related news

error: Content is protected !!