Thursday, April 18, 2024
spot_imgspot_img
spot_imgspot_img

ರಾತ್ರೋ ರಾತ್ರಿ ನಡೆಯಿತು ದಂಪತಿಗಳ ಭೀಕರ ಹತ್ಯೆ..!

- Advertisement -G L Acharya panikkar
- Advertisement -

ದಾವಣಗೆರೆ: ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಎಲೆಬೇತೂರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಕೊಲೆಯಾದ ದಂಪತಿ ಗುರುಸಿದ್ದಯ್ಯ (80) ಮತ್ತು ಇವರ ಪತ್ನಿ ಸರೋಜಮ್ಮ (75) ಎನ್ನಲಾಗಿದೆ.

vtv vitla
vtv vitla

ಗ್ರಾಮದ ಮನೆಯಲ್ಲಿ ಪತಿ‌-ಪತ್ನಿ ಇಬ್ಬರೇ ವಾಸವಿದ್ದರು. ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮದುವೆ ಮಾಡಿದ್ದರು. ಸೋಮವಾರ ತಡರಾತ್ರಿ ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಪಕ್ಕದ ಮನೆಯ ಮಹಿಳೆ ಭೇಟಿ ಮಾಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿದೆ. ಕೊಲೆಗಾರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Related news

error: Content is protected !!