Tuesday, June 23, 2026
spot_imgspot_img
spot_imgspot_img

ರಿಸೆಪ್ಷನ್ ವೇಳೆ ಕುಸಿದು ಬಿದ್ದು ಮದುಮಗಳು ಸಾವು; ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ

- Advertisement -
- Advertisement -
vtv vitla
vtv vitla

ಕೋಲಾರ: ಮದುವೆಯಾಗಿ ಸುಖ ಜೀವನ ಕಾಣಬೇಕಿದ್ದ ಯುವತಿಯೊಬ್ಬಳ ಜೀವನದಲ್ಲಿ ವಿಧಿ ತನ್ನ ಲೀಲೆ ತೋರಿದೆ. ಆ ಯುವತಿಯ ಸುಂದರ ಬದುಕನ್ನು ಮದುವೆ ರಿಸೆಪ್ಷನ್ ವೇಳೆಯೇ ಚಿವುಟಿಹಾಕಿದೆ. ಚೈತ್ರಾ (26) ಬ್ರೈನ್ ಡೆಡ್ ಆಗಿ ಅಸ್ವಸ್ಥಳಾದ ಮದುಮಗಳು.

ತನ್ನ ಮದುವೆಯ ಆರತಕ್ಷತೆಯಲ್ಲಿ ಕುಸಿದು ಬಿದ್ದು ಮದುಮಗಳು ಅಸ್ವಸ್ಥಳಾಗಿದ್ದಾಳೆ. ತಕ್ಷಣ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿ, ಅಲ್ಲಿನ ವೈದ್ಯರು ಆಕೆಯನ್ನು ಬ್ರೈನ್ ಡೆಡ್ ಎಂದು ಘೋಷಣೆ ಮಾಡಿರುವ ಮನಕಲಕುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.

ಈ ಯುವತಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದವರು. ಆಕೆಯ ನಿಧನಾನಂತರ ಚೈತ್ರಾಳ ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -

Related news

error: Content is protected !!