Saturday, June 27, 2026
spot_imgspot_img
spot_imgspot_img

ಲಾರಿ ಚಕ್ರಕ್ಕೆ ಸಿಲುಕಿದ ಅರ್ಧ ದೇಹ : ನರಳಾಡಿ ನರಳಾಡಿ ಅಸುನೀಗಿದ ಬಾಲಕ

- Advertisement -
- Advertisement -

ಬಾಲಕನ ಸೊಂಟದ ಕೆಳಗಿನ ಭಾಗ ಚರಂಡಿ ಹಾಗೂ ಲಾರಿ ಚಕ್ರದ ನಡುವೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೀರಗಾಂವ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಬಾಲಕನ ಅರ್ಧ ದೇಹ ಇಕ್ಕಟ್ಟಿಗೆ ಸಿಲುಕಿ ನರಳಾಡುತ್ತಿದ್ದ. ಕೊನೆಗೆ ಲಾರಿ ಚಕ್ರಕ್ಕೆ ಸಿಲುಕಿದ್ದ ಆ ಬಾಲಕನನ್ನು ರಕ್ಷಿಸಲಾಯಿತು. ಆದ್ರೂ ತೀವ್ರವಾಗಿ ಗಾಯಗೊಂಡಿದ್ದ ಆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ.

ಬಾಲಕ ಅಂಗಡಿಗೆ ಹೋಗಿ ಬರುವಾಗ ಲಾರಿಯೊಂದು ಏಕಾಎಕಿ ನುಗ್ಗಿದೆ. ಪರಿಣಾಮ ಲಾರಿಯ ಚಕ್ರಕ್ಕೆ ಬಾಲಕ ಸಿಲುಕಿದ್ದಾನೆ. ಆದರೆ ಲಾರಿ ಅತೀ ವೇಗದಲ್ಲಿದ್ದ ಪರಿಣಾಮ ಬಾಲಕ ಸಮೇತ ಲಾರಿ ಚಕ್ರ ಅನತಿ ದೂರದಲ್ಲಿದ್ದ ಚರಂಡಿಯೊಳಗೆ ಹೋಗಿ ಸಿಲುಕಿಕೊಂಡಿದೆ. ಘಟನಾ ಸ್ಥಳದಲ್ಲಿದ್ದ ಜನರು ಬಾಲಕನ್ನು ಹೊರತೆಗೆಯಲು ಹರಸಾಹಪಟ್ಟರು. ಕೊನೆಗೆ ಜೆಸಿಬಿ ಸಹಾಯದಿಂದ ಬಾಲಕನ್ನು ಲಾರಿಚಕ್ರ-ಚರಂಡಿ ನಡುವಿನ ಸ್ಥಳದಿಂದ ಹೊರ ತರಲಾಯಿತು.

ಇದೇ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ನಿಪ್ಪಾಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ಬಾಲಕ ಇದೀಗ ಸಾವು ಕಂಡಿದ್ದಾನೆ. ಈ ಸಂಬಂಧ ಖಡಕಲಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಡವಾಗಿ ಬೆಳಕಿಗೆ ಬಂದ ಈ ಘಟನೆಯ ವಿಡಿಯೋದಲ್ಲಿ ಆ ಬಾಲಕ ಹೊಟ್ಟೆ ಕಟ್‌ ಆಗಿಬಿಟ್ಟಿದೆ ಎಂದು ಗೋಳಾಡುತ್ತಿದ್ದಾಗ ಅಲ್ಲಿದ್ದವರೆಲ್ಲಾ ಅಯ್ಯೋಯೋ ಯಪ್ಪಾ ಅಂತ ಕಣ್ಣೀರು ಹಾಕುತ್ತಿದ್ದರು.

- Advertisement -

Related news

error: Content is protected !!