Monday, November 2, 2026
spot_imgspot_img
spot_imgspot_img

ಲಿಖಿಂಪುರ ಘಟನೆಯನ್ನು ಖಂಡಿಸಿ ಸಾಲೆತ್ತೂರಿನಲ್ಲಿ ಎಸ್ ಡಿ ಪಿ ಐ ಕೊಳ್ನಾಡು ಬ್ಲಾಕ್ ವತಿಯಿಂದ ಪ್ರತಿಭಟನೆ

- Advertisement -
- Advertisement -

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ದ ಕೊಳ್ನಾಡು ಬ್ಲಾಕ್ ವತಿಯಿಂದ ಉತ್ತರ ಪ್ರದೇಶದ ಲಂಖಿಂಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ವಾಹನ ಹರಿಸಿ ನಾಲ್ಕು ಜನ ರೈತರ ಹತೈ ಮಾಡಿರುವುದನ್ನು ಖಂಡಿಸಿ ಸಾಲೆತ್ತೂರು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನ ಸಭೆಯ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಕೊಳ್ನಾಡು ಬ್ಲಾಕ್ ಅಧ್ಯಕ್ಷ ಬಶೀರ್ ಕೊಳ್ನಾಡು ವಹಿಸಿದ್ದರು.

ಪ್ರತಿಭಟನೆಯನ್ನು ಉದ್ದೇಶಿಸಿ ವಿಟ್ಲ ಪಡ್ನೂರು ಪಂಚಾಯತ್ ಸದಸ್ಯ ಮೆಹಮೂದ್ ಕಡಂಬು ಪ್ರಾಸ್ತಾವಿಕ ಭಾಷಣ ಮಾಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ‌ ಎಸ್ ಡಿ ಪಿ ಐ ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಶ್ರಪ್ ಮಂಚಿ ಕೇಂದ್ರ ಸಚಿವ ಅಮಿತ್ ಮಿಶ್ರಾ ಬೆಂಗಾವಲು ವಾಹನದೊಂದಿಗೆ ಉದ್ದೇಶ ಪೂರ್ವಕವಾಗಿ ರೈತರ ಹತೈ ಮಾಡಿದ್ದಾರೆ ಕೂಡಲೆ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಮತ್ತು ಅವರ ಮೇಲೆ ಉನ್ನತ ಇಲಾಖೆಯಿಂದ ತನಿಖೆ ನಡೆಸಬೇಕು ಆಗ್ರಹಿಸಿದರು.

ಈ‌‌ ದೇಶದಲ್ಲಿ ರೈತರನ್ನು ಒಕ್ಕೂಟ ಸರಕಾರ ಸೇರಿಕೊಂಡು ಬೇಟೆಯಾಡುತ್ತಿದ್ದು, ದೇಶದ ಜನರು ಒಗ್ಗೂಡಬೇಕಿದೆ ಎಂದು ಬಂಟ್ವಾಳ ಕ್ಷೇತ್ರ ಸಮೀತಿ ಉಪಾಧ್ಯಕ್ಷ ಕಲಂದರ್ ಪರ್ತಿಪ್ಪಾಡಿ ತಿಳಿಸಿದರು.

ಪ್ರತಿಭಟನೆ ಸಭೆ ವೇದಿಕೆಯಲ್ಲಿ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕೋಶಾಧಿಕಾರಿ ಪೈಝಲ್ ಮಂಚಿ ಎಸ್ ಡಿ ಪಿ ಐ ಕೊಳ್ನಾಡು ಬ್ಲಾಕ್ ಸಮಿತಿ ಕಾರ್ಯದರ್ಶಿ ಅಲಿ ಕಡಂಬು ಬೊಳಂತೂರು ಪಂಚಾಯತ್ ಸದಸ್ಯರಾದ ಹಮೀದ್ ಬೊಳಂತೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎನ್ ಫಾರೂಕ್ ಮಂಚಿ ನಿರೂಪಿಸಿದರು.

driving
- Advertisement -

Related news

error: Content is protected !!