Monday, May 6, 2024
spot_imgspot_img
spot_imgspot_img

ವಿಟ್ಲ: ಆ.1ರಿಂದ ಸೆ.2ರವರೆಗೆ ವಿಶ್ವ ಹಿಂದೂ ಪರಿಷದ್‌ ಆಶ್ರಯದಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

- Advertisement -G L Acharya panikkar
- Advertisement -
vtv vitla

ವಿಟ್ಲ: ವಿಶ್ವ ಹಿಂದೂ ಪರಿಷದ್‌ ಆಶ್ರಯದಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಆಗಸ್ಟ್‌31ರಿಂದ ಸೆಪ್ಟೆಂಬರ್‌ 2‍ರವರೆಗೆ ಅನಂತ ಸದನ ವಿಟ್ಲ ಇಲ್ಲಿ ನಡೆಯಲಿದೆ.

ಬೆಳಿಗ್ಗೆ 8.00 ಗಂಟೆಗೆ ಮೇಗಿನ ಪೇಟೆಯ ಶ್ರೀ ಮಹಮ್ಮಾಯಿ ಮಂದಿರದಿಂದ ಶ್ರೀ ಗಣೇಶನ ಮೆರವಣಿಗೆ ನಂತರ ಬೆಳಿಗ್ಗೆ 9.15 ಶ್ರೀ ಗಣೇಶನ ಪ್ರತಿಷ್ಠೆ, ಶ್ರೀ ಮಹಾಗಣಪತಿ ಹವನ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ವಿಟ್ಲ ವಹಿಸಲಿದ್ದರೆ. ಧ್ವಜಾರೋಹಣವನ್ನು ಡಾ. ಕಿಶೋರ್ ದಂತ ವೈದ್ಯರು ಅಶ್ವಿನಿ ಕ್ಲಿನಿಕ್, ವಿಟ್ಲ ನೇರವೇರಿಸಲಿದ್ದು, ದೀಪ ಪ್ರಜ್ವಲನೆಯನ್ನು ಬಟ್ಟು ಯಾನೆ ನಾರಾಯಣ ಗುರುಸ್ವಾಮಿ, ಶ್ರೀ ಅಯ್ಯಪ್ಪ ದೇವಸ್ಥಾನ ವಿಟ್ಲ ಮಾಡಲಿದ್ದಾರೆ. ಅತಿಥಿಯಾಗಿ ಸೀತಾರಾಮ ಭಟ್‌, ಪೆರಾಜೆ ಸತ್ಸಂಗ ಪ್ರಮುಖ್‌ ವಿ.ಹಿಂ.ಪ. ಪುತ್ತೂರು ನಗರ ಭಾಗವಹಿಸಲಿದ್ದರೆ. ವೇದಿಕೆಯಲ್ಲಿ ವಿ. ಶೀನ ಮೋಕ್ತಸರರು, ಶ್ರೀ ಮಹಮ್ಮಾಯಿ ಮಂದಿರ, ಮೇಗಿನ ಪೇಟೆ ಉಪಸ್ಥಿತಿ ವಹಿಸಲಿದ್ದಾರೆ.

ಬೆಳಿಗ್ಗೆ 11.00ಕ್ಕೆ‌ ಗಂಟೆಗೆ ಭಜನೆ, ವಿಶ್ವನಾಥ ದೇವಾಡಿಗ ಮತ್ತು ಬಳಗ ನೀರಕಣಿ ವಿಟ್ಲ ಇವರಿಂದ ನಡೆಯಲಿದೆ. ಅಪರಾಹ್ನ 12-30ಕ್ಕೆ ಮಹಾಪೂಜೆ ನಂತರ ಸ್ಫರ್ಧೆಗಳಾದ, ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ, ಹೂಹಾರ ಕಟ್ಟುವ ಸ್ಫರ್ಧೆ, ರಂಗೋಲಿ ಸ್ಫರ್ಧೆ ನಡೆಯಲಿದೆ. ಸಂಜೆ 5.00 ಗಮಟೆಗೆ ಕುಣಿತ ಭಜನೆ ಕಾರ್ಯಕ್ರಮವು ಶ್ರೀ ಕಾಶೀ ಮಕ್ಕಳ ಭಜನಾ ತಂಡ ಕಾಶೀ ಮಠ ವಿಟ್ಲ ಇವರಿಂದ ನಡೆಯಲಿದೆ.

ಸೆಪ್ಟೆಂಬರ್‌ 1ರಂದು ಬೆಳಿಗ್ಗೆ 7.00 ಗಂಟೆಗೆ ಶ್ರೀ ಮಹಾಗಣಪತಿ ಹವನ, ಬೆಳಿಗ್ಗೆ 8.00 ಭಜನೆ ಶ್ರೀ ವಿಶ್ವಬ್ರಾಹ್ಮಣ ಸೇವಾ ಸಂಘ ಪಡಿಬಾಗಿಲು ಇವರಿಂದ ನಡೆಯಲಿದೆ. ಮಧ್ಯಾಹ್ನ 12.00ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4.00 ಗಂಟೆ ಭಜನೆ, ಸಾರಸ್ವತ ಭಜನಾ ಮಂಡಳಿ, ವಿಟ್ಲ, ಸಂಜೆ 6.30ರಿಂದ “ಯಕ್ಷಗಾನ ಬೊಂಬೆಯಾಟ” ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ.) ಕಾಸರಗೋಡು ಇವರಿಂದ, “ಶ್ರೀ ದೇವಿ ಮಹಾತ್ಮೆ” ಎಂಬ ಪೌರಾಣಿಕ ಕಥಾಪ್ರಸಂಗ ನಿರ್ದೇಶಕರು ಕೆ.ವಿ ರಮೇಶ್‌, ರಾತ್ರಿ 9.00 ಗಂಟೆಗೆ ರಂಗಪೂಜೆ ನಡೆಯಲಿದೆ.

ಸೆಪ್ಟೆಂಬರ್‌ 2ರಂದು ಬೆಳಿಗ್ಗೆ 7.00ಕ್ಕೆ ಮಹಾಗಣಪತಿ ಹವನ. 7.30ಕ್ಕೆ ಭಜನೆ, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮಾಮೇಶ್ವರ,10.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಸವಿತಾ ಕುಮಾರಿ ನಿವೃತ್ತ ಅಂಚೆ ಪಾಲಕರು ವಹಿಸಲಿದ್ದಾರೆ.

ಧಾರ್ಮಿಕ ಉಪನ್ಯಾಸವನ್ನು ಸುರೇಶ್ ಪರ್ಕಳ, ಸಾಮಾಜಿಕ ಕಾರ್ಯಕರ್ತರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಶವಂತ್ ನಿಡ್ಯ ಅಧ್ಯಕ್ಷರು, ಯುವವಾಹಿನಿ (ರಿ.)ವಿಟ್ಲ ಘಟಕ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ವಿ. ಸೋಮಪ್ಪನಾಯ್ಕ, (Retd. Senior Attendent International Airport Mangalore), ಗೋಪಾಲಕೃಷ್ಣ ಶೆಟ್ಟಿ, ಅಧ್ಯಕ್ಷರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ವಿಟ್ಲ ಉಪಸ್ಥಿತಿ ವಹಿಸಲಿದ್ದಾರೆ. ಮಧ್ಯಾಹ್ನ 12.00ಕ್ಕೆ‌ ಮಹಾಪೂಜೆ, ಅನ್ನಸಂತರ್ಪಣೆ, ಗಂಟೆ 2.30ಕ್ಕೆ ಶೋಭಾಯಾತ್ರೆ ನಡೆಯಲಿದೆ.

ಶ್ರೀ ಮಹಾಗಣಪತಿಯ ಶೋಭಾಯಾತ್ರೆಯು ಮಂಗಳೂರು ರಸ್ತೆಯ ಭಾರತ್ ಪೆಟ್ರೋಲಿಯಂ, ಪುತ್ತೂರು ರಸ್ತೆಯ ಮೇಗಿನ ಪೇಟೆಯಾಗಿ, ಅಡ್ಡದ ಬೀದಿ ರಸ್ತೆ ಅರಮನೆ ರಸ್ತೆಯಾಗಿ ಕಾಶೀಮಠ, ಶಾಲಾ ರಸ್ತೆ, ಪ್ರವಾಸಿ ಬಂಗಲೆ ರಸ್ತೆಯಾಗಿ ಸಾಗಿ ಶ್ರೀ ಅನಂತೇಶ್ವರ ದೇವಸ್ಥಾನದ ಕೆರೆಯ ಬಳಿ ಪೂಜೆ, ವಂದೇ ಮಾತರಂ, ಧ್ವಜಾವತರಣ ನಂತರ ಕೆರೆಯಲ್ಲಿ ವಿಗ್ರಹದ ಜಲಸ್ತಂಭನ ನಡೆಯಲಿದೆ.

- Advertisement -

Related news

error: Content is protected !!