Saturday, April 27, 2024
spot_imgspot_img
spot_imgspot_img

ವಿಟ್ಲ: ನೆರೆಯಂತಾದ ರಸ್ತೆ; ಹರಿಯುವ ನೀರನ್ನು ಮಾರ್ಗದಲ್ಲೇ ತಡೆವೊಡ್ಡಿದ ಸ್ಥಳೀಯ ವ್ಯಕ್ತಿ – ಸಾರ್ವಜನಿಕರು ಹೈರಾಣ

- Advertisement -G L Acharya panikkar
- Advertisement -

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ದಡ್ಡಲಡ್ಕ ಎಂಬಲ್ಲಿ ವ್ಯಕ್ತಿಯೋರ್ವರು ಕ್ಷುಲಕ್ಕ ಕಾರಣವೊಡ್ಡಿ ಹರಿಯುವ ನೀರನ್ನು ಮಾರ್ಗದಲ್ಲೇ ತಡೆಒಡ್ಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಘಟನೆ ನಡೆದಿದೆ. ಹರಿಯುವ ನೀರನ್ನು ಮಾರ್ಗದಲ್ಲೇ ತಡೆಒಡ್ಡಿದ್ದರಿಂದ ಸಾರ್ವಜನಿಕರು, ವಾಹನ ಸವಾರರು, ಅಂಗನವಾಡಿ, ಶಾಲೆಗಳಿಗೆ ಹೋಗುವ ಮಕ್ಕಳು, ಮಹಿಳೆಯರು, ಇತರೆ ಪಾದಾಚಾರಿಗಳು ತೊಂದರೆ ಅನುಭವಿಸುಂತಾಗಿದೆ.

ಅಜ್ಜಿನಡ್ಕ, ದಡ್ಡಲಡ್ಕ, ಕಂಬಳಿಮೂಲೆ, ಮಾಡತ್ತಡ್ಕ ಸೇರುವ ಜಿಲ್ಲಾ ಪಂಚಾಯತ್‌ ರಸ್ತೆಯ ದಡ್ಡಲಡ್ಕ ಎಂಬಲ್ಲಿನ ಅಂಗನವಾಡಿ ಸಮೀಪದ ರಸ್ತೆಯಲ್ಲಿ ಬರುವ ನೀರನ್ನು ಸ್ಥಳೀಯ ವ್ಯಕ್ತಿ ಕಲ್ಲು, ಮಣ್ಣು ಹಾಕಿ ತಡೆದಿದ್ದಾರೆ. ಇದರಿಂದ ರಸ್ತೆಯು ಕೃತಕ ನೆರೆಯಿಂದ ತುಂಬಿದೆ.

ಇದೇ ಮಾರ್ಗದಲ್ಲಿ ಶಾಲಾ ಮಕ್ಕಳು ಹಾಗೂ ಬೀಡಿ ಕಾರ್ಮಿಕ ಮಹಿಳೆಯರು ಮತ್ತು ಇನ್ನಿತರ ಕೆಲಸಕ್ಕೆ ಹೋಗುವ ಸಾರ್ವಜನಿಕರಿಗೆ ಭಯದ ವಾತವರಣ ಸೃಷ್ಟಿಯಾಗಿದೆ. ಕಾರಣವೇನೆಂದರೆ ಅಲ್ಲೇ ಮಾರ್ಗ ಬದಿಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಇದ್ದು ವಿದ್ಯುತ್ ಶಾಕ್ ತಗಲುವ ಸಾಧ್ಯತೆಯೂ ಇದೆ. ಇದರಿಂದ ನೊಂದ ಸಾರ್ವಜನಿಕರು ವಿಟ್ಲ ಮುಡ್ನೂರು ಪಿಡಿಓ ಅವರಿಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಅಂತೆಯೇ ವಿಟ್ಲ ಮೆಸ್ಕಾಂ ಅಧಿಕಾರಿಗಳಿಗೆ ಅಪಾಯದಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಅನ್ನು ಸ್ಥಳಾಂತರಗೊಳಿಸುವಂತೆ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!