Friday, March 29, 2024
spot_imgspot_img
spot_imgspot_img

ವರ್ಷಕ್ಕೆ ಎರಡು ಬಾರಿ ಹಣ್ಣು ನೀಡುವ ಹಲಸು “ಭೈರಚಂದ್ರ”.!

- Advertisement -G L Acharya panikkar
- Advertisement -

ವರ್ಷಕ್ಕೆ ಎರಡು ಬಾರಿ ಹಣ್ಣು ನೀಡುವ ಹಲಸಿನ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಈ ತಳಿಯನ್ನು ಕೃಷಿ ಮೇಳದಲ್ಲಿ ರೈತರಿಗೆ ಮಾಹಿತಿ ನೀಡಲು ಪ್ರದರ್ಶನಕ್ಕಿಡಲಾಗಿತ್ತು.

ಭೈರಚಂದ್ರ ಹಲಸು

“ಭೈರಚಂದ್ರ” ಹೆಸರಿನ ಈ ತಳಿಯು 3ರಿಂದ 4 ವರ್ಷಗಳಲ್ಲೇ ಇಳುವರಿ ನೀಡುತ್ತದೆ. ತರಕಾರಿಯಾಗಿಯೂ ಈ ಹಣ್ಣನ್ನು ಬಳಸಬಹುದು. ಕೈತೋಟದಲ್ಲೂ ಈ ತಳಿಯನ್ನು ಸುಲಭವಾಗಿ ಬೆಳೆಸಬಹುದು. ರಾಮನಗರ ಜಿಲ್ಲೆಯ ಭೈರಾ ಪಟ್ಟಣದಲ್ಲಿ ಮೊದಲ ಬಾರಿ ಈ ತಳಿಯ ಬಗ್ಗೆ ಪ್ರಯೋಗ ನಡೆಸಲಾಯಿತು. ಮೂರು ವರ್ಷಗಳ ಪ್ರಯೋಗದ ಬಳಿಕ ಈ ತಳಿಯನ್ನು ಬಿಡುಗಡೆ ಮಾಡಲಾಗಿದೆ.

ಈ ಹಲಸಿನ ಹಣ್ಣಿನ ತೊಳೆ ಉದ್ದವಾಗಿದೆ. ಸಕ್ಕರೆ ಅಂಶವೂ ಹೆಚ್ಚಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಸಸ್ಯ ಜೈವಿಕ ತಂತ್ರಜ್ಞಾನದ ಪ್ರಾಧ್ಯಾಪಕಿ ಡಾ. ಎಸ್. ಶ್ಯಾಮಲಮ್ಮ ತಿಳಿಸಿದ್ದಾರೆ. ನಿಯಮಿತವಾಗಿ ಏಪ್ರಿಲ್-ಮೇ ತಿಂಗಳಲ್ಲಿ ಈ ತಳಿ ಹಣ್ಣು ನೀಡುತ್ತದೆ. ಜತೆಗೆ, ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲೂ ಈ ತಳಿಯ ಗಿಡದಿಂದ ಹಣ್ಣುಗಳು ದೊರೆಯುತ್ತವೆ. ಹಣ್ಣಿನ ಸರಾಸರಿ ತೂಕ 8.72ಕೆ.ಜಿ.

ಸಾಂದರ್ಭಿಕ ಚಿತ್ರ

1 ಕೆ.ಜಿ. ಹಣ್ಣಿನಲ್ಲಿ 20ರಿಂದ 23 ತೊಳೆಗಳಿರುತ್ತವೆ, ಒಂದು ತೊಳೆಯ ಸರಾಸರಿ ತೂಕ 32 ಗ್ರಾಂ
ಉದ್ದ ಮತ್ತು ಅಗಲವಿರುವ ತೊಳೆಗಳು ಕೇಸರಿ ಬಣ್ಣವನ್ನು ಹೊಂದಿದ್ದು, ಮಧ್ಯಮ ಗಾತ್ರದ್ದಾಗಿವೆ ಇವು ಭೈರಚಂದ್ರ ತಳಿಯ ವೈಶಿಷ್ಟ್ಯಗಳು.

- Advertisement -

Related news

error: Content is protected !!