Sunday, July 19, 2026
spot_imgspot_img
spot_imgspot_img

ಸಂಪಾಜೆ: ಕಡೆಪಾಲದಲ್ಲಿ ವಿವಾಹಿತ ಯುವತಿ ಅನುಮಾನಾಸ್ಪದ ಸಾವು: ಕೊಲೆ ಆರೋಪ; ಮರಣೋತ್ತರ ಪರೀಕ್ಷೆಗೆ ಮಂಗಳೂರಿಗೆ ರವಾನೆ

- Advertisement -
- Advertisement -

ಸಂಪಾಜೆ: ಸಂಪಾಜೆ ಗ್ರಾಮದ ಕಡೆಪಾಲ ಆಲಿಗುಡ್ಡೆ ನಿವಾಸಿ ಅನ್ಸಾರ್ ಅವರ ಪತ್ನಿ, ಕುಂಬ್ರ ಸಾರೆಪುಣಿ ನಿವಾಸಿಯಾದ ಫಾತಿಮತ್ ನಿಶಾನ ಅವರ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.ಆರಂಭದಲ್ಲಿ ಈ ಘಟನೆ ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಆದರೆ ಬಳಿಕ ಮೃತೆಯ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚುವ ನಿಟ್ಟಿನಲ್ಲಿ ಮೃತದೇಹವನ್ನು ಮರಣೋತ್ತರ ವಿಧಿ ವಿಜ್ಞಾನ ಪರೀಕ್ಷೆ (ಫೊರೆನ್ಸಿಕ್ ಪೋಸ್ಟ್‌ಮಾರ್ಟಂ)ಗಾಗಿ ಮಂಗಳೂರಿನ ಕಣಚೂರು ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತ ಫಾತಿಮತ್ ನಿಶಾನ ಅವರು ತಾಯಿ ಝುಬೈದಾ ಹಾಗೂ ಸಹೋದರರಾದ ನಿಜಾಮ್ ಮತ್ತು ನವಾಜ್ ಅವರನ್ನು ಅಗಲಿದ್ದಾರೆ.

ಪ್ರಾಥಮಿಕವಾಗಿ ಆತ್ಮಹತ್ಯೆ ಎಂದು ಭಾವಿಸಲಾಗಿದ್ದ ಈ ಪ್ರಕರಣ, ಕುಟುಂಬಸ್ಥರ ಕೊಲೆ ಆರೋಪದ ಹಿನ್ನೆಲೆಯಲ್ಲಿ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯ ಬಳಿಕ ಸಾವಿನ ನಿಖರ ಕಾರಣ ಬೆಳಕಿಗೆ ಬರಬೇಕಿದೆ.

- Advertisement -

Related news

error: Content is protected !!