Sunday, May 5, 2024
spot_imgspot_img
spot_imgspot_img

ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಬಂಡೆಕಲ್ಲಿಗೆ ಡಿಕ್ಕಿ; 60 ಜನ ಮೃತ್ಯು..!

- Advertisement -G L Acharya panikkar
- Advertisement -
vtv vitla

ಇಟಲಿ: ದಕ್ಷಿಣ ಇಟಲಿಯ ಕರಾವಳಿಯ ಬಳಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಬಂಡೆಕಲ್ಲಿಗೆ ಅಪ್ಪಳಿಸಿದ ಪರಿಣಾಮ 60 ಜನರು ಸಾವನ್ನಪ್ಪಿದ್ದಾರೆ. 80 ಜನರನ್ನು ಸ್ಥಳೀಯರ ನೆರವಿನಿಂದ ರಕ್ಷಣೆ ಮಾಡಲಾಗಿದೆ ಎಂದು ಇಟಾಲಿಯನ್ ಕರಾವಳಿ ಸಿಬ್ಬಂದಿ ಮತ್ತು ಪೊಲೀಸರು ತಿಳಿಸಿದ್ದಾರೆ.

ಇಟಲಿಯ ಕ್ಯಾಲಬ್ರಿಯಾದ ಪೂರ್ವ ಕರಾವಳಿಯಲ್ಲಿರುವ ಕಡಲತೀರದ ರೆಸಾರ್ಟ್‌‌ನ ಸ್ಟೆಕಾಟೊ ಡಿ ಕಟ್ರೊ ಬಳಿ ಹಡಗು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಹಡಗು ಬಂಡೆಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.

ಹಡಗಿನಲ್ಲಿ ಸುಮಾರು 120ಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗಿದೆ. ಅವಘಡ ಸಂಭವಿಸಿದ ವೇಳೆ ಸುಮಾರು 80 ಮಂದಿ ಈಜಿ ದಡ ಸೇರಿದ್ದಾರೆ ಎನ್ನಲಾಗಿದ್ದು 60 ಮಂದಿಯ ಮೃತದೇಹಗಳು ಕರಾವಳಿ ಕಡಲ ತೀರದಲ್ಲಿ ತೇಲುತ್ತಿತ್ತು ಎನ್ನಲಾಗಿದೆ. ರಕ್ಷಣಾ ತಂಡ ಮೃತ ದೇಹಗಳನ್ನು ನೀರಿನಿಂದ ಮೇಲೆತ್ತಿದ್ದು ರಕ್ಷಣಾ ಕಾರ್ಯ ಪ್ರ ಗತಿಯಲ್ಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಸಮುದ್ರದಲ್ಲಿ ಕಾರ್ಯಾಚರಣೆ ಕಷ್ಟ ಕರವಾಗಿದ್ದರಿಂದ ಅಗ್ನಿ ಶಾಮಕ ದಳದವರು ಜೆಟ್ ಸ್ಕಿಸ್ ಬಳಸಿ ಕಾರ್ಯಾಚರಣೆ ನಡೆಸಿದ್ದರು.

- Advertisement -

Related news

error: Content is protected !!