Monday, May 20, 2024
spot_imgspot_img
spot_imgspot_img

ವಾಂತಿ, ಹೊಟ್ಟೆ ನೋವು, ಅತಿಸಾರಕ್ಕೆ ಕಾರಣವಾಗುವ ಫುಡ್ ಪಾಯಿಸನ್​ಗೆ ಮನೆ ಮದ್ದು

- Advertisement -G L Acharya panikkar
- Advertisement -

ಅನಾರೋಗ್ಯಕರವಾದ ಆಹಾರ ಹಾಗು ಜೀವನಶೈಲಿಯಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದರಲ್ಲಿ ಫುಡ್ ಪಾಯಿಸನ್ ಅಥವಾ ಆಹಾರದ ವಿಷ ಕೂಡ ಒಂದು. ಮನೆ ಆಹಾರಕ್ಕಿಂತ ಹೆಚ್ಚಾಗಿ ಹೋಟೆಲ್​ಗಳಲ್ಲಿ ಅಥವಾ ರಸ್ತೆ ಬದಿಯ ಆಹಾರ ಮಳಿಗೆಗಳಲ್ಲಿ ತಿಂದ ಆಹಾರದಿಂದ ಫುಡ್ ಪಾಯ್ಸನ್ ಉಂಟಾಗುತ್ತದೆ. ಪರಿಣಾಮವಾಗಿ ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವು ಸಂಭವಿಸುತ್ತದೆ. ತೀವ್ರತೆ ಹೆಚ್ಚಿದ್ದರೆ ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು. ಹೀಗಾಗಿ ಫಾಸ್ಟ್ ಫುಡ್ ಆಹಾರ ಸೇವನೆಗಿಂತ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸುವುದು ಉತ್ತಮ. ಅದಾಗ್ಯೂ ಹೊರಗಿನ ಆಹಾರ ಸೇವಿಸಿ ಫುಡ್ ಪಾಯಿಸನ್ ಆದರೆ ಇದನ್ನು ಪರಿಹರಿಸಲು ವೈದ್ಯಕೀಯ ಔಷಧಿಯ ಹೊರತಾಗಿ ಮನೆ ಮದ್ದುಗಳು ಕೂಡ ಇವೆ. ಅವುಗಳು ಈ ಕೆಳಗಿನಂತಿವೆ.

ಆಪಲ್ ಸೈಡರ್ ವಿನೆಗರ್ ಸೇವನೆ: ಒಂದು ಕಪ್ ಬಿಸಿ ನೀರಿಗೆ 2 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕುಡಿದರೆ ಫುಡ್ ಪಾಯ್ಸನ್ ಸಮಸ್ಯೆ ನಿವಾರಣೆಯಾಗಲಿದೆ.

ನಿಂಬೆ ರಸ: ಒಂದು ಚಿಟಿಕೆ ಸಕ್ಕರೆಗೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ ದಿನಕ್ಕೆ 2 ರಿಂದ 3 ಬಾರಿ ತಿನ್ನಿರಿ. ಇದನ್ನು ಸೇವಿಸುವುದರಿಂದ ಆಹಾರ ವಿಷದ ಸಮಸ್ಯೆ ದೂರವಾಗುತ್ತದೆ.

ಮೊಸರು-ಮೆಂತ್ಯ ಸೇವನೆ: ಒಂದು ಚಮಚ ಮೊಸರಿಗೆ ಒಂದು ಚಮಚ ಮೆಂತ್ಯ ಬೀಜಗಳನ್ನು ಸೇರಿಸಿ. ನಂತರ ಈ ಮಿಶ್ರಣವನ್ನು ಜಗಿಯದೆ ನುಂಗಿ. ಇದು ಹೊಟ್ಟೆ ನೋವು ಮತ್ತು ವಾಂತಿ ಸಮಸ್ಯೆಯನ್ನು ನಿವಾರಿಸಲಿದೆ.

ಜೇನು ತುಪ್ಪ: ಶುಂಠಿ ಮತ್ತು ಜೇನುತುಪ್ಪವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ತೊಂದರೆಗಳು ದೂರವಾಗುತ್ತವೆ. ಒಂದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ಶುಂಠಿ ರಸವನ್ನು ಸೇರಿಸಿ ಕುಡಿಯಿರಿ. ಈ ಸಲಹೆಯು ಹೊಟ್ಟೆ ನೋವಿನಿಂದ ಉತ್ತಮ ಪರಿಹಾರವನ್ನು ನೀಡುತ್ತದೆ.

ಜೀರಿಗೆ ಸೂಪ್: ಬಾಣಲೆಯಲ್ಲಿ ಜೀರಿಗೆಯನ್ನು ಹುರಿದು ಪುಡಿಮಾಡಿ. ಈ ಜೀರಿಗೆ ಪುಡಿಯನ್ನು ಸೂಪ್​ಗೆ ಸೇರಿಸಿ ತಿಂದರೆ ಹೊಟ್ಟೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ.

ತುಳಸಿ ಎಲೆಗಳ ರಸ: ಒಂದು ಬಟ್ಟಲಿನಲ್ಲಿ ತುಳಸಿ ಎಲೆಗಳ ರಸವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಹೊಟ್ಟೆನೋವಿನ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ.

ಬಾಳೆ ಹಣ್ಣು: ಬಾಳೆಹಣ್ಣು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ. ಬಾಳೆಹಣ್ಣನ್ನು ಮೊಸರಿನಲ್ಲಿ ಮ್ಯಾಶ್ ಮಾಡಿ ತಿನ್ನಿರಿ. ಆಹಾರ ವಿಷದ ಸಮಸ್ಯೆಯಿಂದ ಪರಿಹಾರ ಪಡೆಯಲು ಈ ಸಲಹೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಇದರ ಹೊರತಾಗಿ, ಆಹಾರ ವಿಷ ಆದಾಗ ವಿಶ್ರಾಂತಿ ಪಡೆಯುವುದರಿಂದ ಸಮಸ್ಯೆಯನ್ನು ಪರಿಹರಿಸಬಹುದು. ಅಲ್ಲದೆ ಮೇಲಿಂದ ಮೇಲೆ ಆಹಾರ, ಪಾನೀಯ ಸೇವನೆಯನ್ನು ನಿಲ್ಲಿಸಿ. ಇದರಿಂದಲೂ ಫುಡ್ ಪಾಯಿಸನ್ ಅನ್ನು ಕಡಿಮೆ ಮಾಡಬಹುದು.

ಆಹಾರ ವಿಷ ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

ಅಂಗಡಿಗಳಿಂದ ಖರೀದಿಸಿದ ತರಕಾರಿ, ಹಣ್ಣುಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಿ
ಆಗಾಗ್ಗೆ ಕೈಗಳನ್ನು ತೊಳೆಯಿರಿ
ಮಾಂಸಗಳನ್ನು ಚೆನ್ನಾಗಿ ತೊಳೆದು ಪದಾರ್ಥಕ್ಕೆ ಹಾಕಿ

ಗಮನಿಸಿ: ಮೇಲಿನ ಸಲಹೆಗಳು ಕೇವಲ ಮಾಹಿತಿಗಾಗಿ, ವೈದ್ಯರ ಸಲಹೆಯನ್ನು ಪಡೆದು ಮುಂದಿನ ಹೆಜ್ಜೆ ಇಡಿ. ಫುಡ್ ಪಾಯಿಸನ್ ಕೆಲವೊಮ್ಮೆ ಆರೋಗ್ಯಕ್ಕೆ ಮಾರಕವಾಗಬಹುದು. ಅಂದರೆ ವಾಂತಿ ಹಾಗೂ ಮಲದಲ್ಲಿ ರಕ್ತಸ್ರಾವ ಆದಾಗ, ತೀವ್ರ ಹೊಟ್ಟೆ ನೋವು, ತೀವ್ರ ನಿರ್ಜಲೀಕರಣ ಹೊಂದಿದಾಗ, ಎರಡು ಮೂರು ದಿನಗಳಿಂದ ಅತಿಸಾರ ಆಗುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅವಶ್ಯಕ.

- Advertisement -

Related news

error: Content is protected !!