Friday, May 17, 2024
spot_imgspot_img
spot_imgspot_img

ವಾಟ್ಸಾಪ್‌ ನಿಂದ ಹೊಸ ಫೀಚರ್ಸ್; ಇನ್ನು ಕಾಲಮಿತಿ ಕೊಟ್ಟು ಮೆಸೇಜ್ ಡಿಲಿಟ್ ಮಾಡಬಹುದು

- Advertisement -G L Acharya panikkar
- Advertisement -
vtv vitla
vtv vitla

ವಾಟ್ಸಾಪ್‌ ಗ್ರಾಹಕರನ್ನು ಸೆಳೆಯಲು ಹಲವು ಪ್ರಯತ್ನ ನಡೆಸುತ್ತಿದೆ. ಇದೀಗ ಹೊಸ ಪೀಚರ್ಸ್ ವೊಂದನ್ನು ಪರಿಚಯಿಸಿದೆ.

ಗ್ರಾಹಕರು ತಮ್ಮ ಸಂದೇಶ, ವಿಡಿಯೋ ಅಥವಾ ಫೋಟೋಗಳನ್ನು 24 ಗಂಟೆ ಅಥವಾ 90 ದಿನಗಳ ಕಾಲಾವಧಿಯೊಳಗೆ ಅಳಿಸಿಹೋಗುವ ರೀತಿ ಸೆಟ್‌ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಕಾಲಮಿತಿ 7 ದಿನಗಳಾಗಿತ್ತು.

ಇದರಿಂದಾಗಿ ಸಂದೇಶ ಕಳಿಸುವ ಬಳಕೆದಾರ ಅಥವಾ ಸ್ವೀಕರಿಸಿದಾತ ಈ ಕಾಲಮಿತಿಯನ್ನು ನಿಗದಿಪಡಿಸಿಕೊಂಡರೆ ನಿಗದಿತ ಕಾಲಾವಧಿಯೊಳಗೆ ಆ ಸಂದೇಶಗಳು ತನ್ನಿಂತಾನೇ ಅಳಿಸಿಹೋಗಲಿವೆ. ಗ್ರೂಪ್‌ ಸಂದೇಶಕ್ಕೂ ಇದು ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಹೊಸ ಆಯ್ಕೆ ಐಚ್ಚಿಕವಾಗಿದ್ದು, ಬಳಕೆದಾರರು ತಮಗೆ ಬೇಕೆಂದರೆ ಮಾತ್ರ ಬಳಸಿಕೊಳ್ಳಬಹುದಾಗಿದೆ. ಬಳಕೆದಾರರ ತಾನು ಕಳಿಸುವ ಸಂದೇಶಗಳಿಗೆ ಕಾಲಮಿತಿ ನಿಗದಿಪಡಿಸಿದರೆ ಅದು ಸ್ವೀಕರಿಸುವಾತನಿಗೂ ಕಾಲಮಿತಿ ಗೋಚರಿಸುತ್ತದೆ ಎನ್ನಲಾಗಿದ್ದು, ಒಂದು ವೇಳೆ ಬಳಕೆದಾರ ತನ್ನ ಸಂದೇಶ ಉಳಿಯಲು ಬಯಸಿದರೆ ಅದಕ್ಕೂ ಅವಕಾಶವಿದೆ.

vtv vitla
vtv vitla
- Advertisement -

Related news

error: Content is protected !!