Wednesday, May 8, 2024
spot_imgspot_img
spot_imgspot_img

ವಾಟ್ಸ್ ​ಆ್ಯಪ್ ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಮಹಿಳೆ

- Advertisement -G L Acharya panikkar
- Advertisement -
driving

ಮಹಾರಾಷ್ಟ್ರ: ಮಹಿಳೆಯೊಬ್ಬರು ಹ್ಯಾಕರುಗಳು ಕಳುಹಿಸಿದ ಒಂದು ಲಿಂಕ್ ಕ್ಲಿಕ್ ಮಾಡಿ ಬರೋಬ್ಬರಿ 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಕಂಡಿವಾಲಿದಲ್ಲಿ ನಡೆದಿದೆ.

ವಂಚಕರು ಆನ್​ಲೈನ್ ಶಾಂಪಿಂಗ್ ಪೋರ್ಟಲ್​ನ ಲಿಂಕ್​ ವೊಂದನ್ನು ವಾಟ್ಸ್ಯಾಪ್ ಮೂಲಕ ಕಳುಹಿಸಿ ಇದನ್ನು ಕ್ಲಿಕ್ ಮಾಡಿದರೆ ಬಹುಮಾನ ಸಿಗಲಿದೆ ಎಂದು ತಿಳಿಸಿದ್ದರು. ಅದರಂತೆ ಲಿಂಕ್ ಕ್ಲಿಕ್ ಮಾಡಿದ್ದ ಮಹಿಳೆಯು ಹೊಸದಾಗಿ ತಮ್ಮ ಐಡಿ ಮತ್ತು ಪಾಸ್‌ವರ್ಡ್ ಅನ್ನು ನೀಡಿದ್ದರು. ಇದೇ ವೇಳೆ ಆಕೆಯ ಖಾತೆಗೆ 64 ರೂಪಾಯಿ ಬಹುಮಾನ ನೀಡಲಾಯಿತು.

ಇನ್ನು ಹೆಚ್ಚಿನ ಮೊತ್ತಕ್ಕಾಗಿ ರಿಚಾರ್ಜ್ ಮಾಡುವಂತೆ ಕೇಳಲಾಯಿತು. ಹೆಚ್ಚಿನ ಬಹುಮಾನ ಆಪೇಕ್ಷಿಸಿ ಮಹಿಳೆಯು ತಮ್ಮ ಖಾತೆಯಲ್ಲಿದ್ದ ಹಣವನ್ನು ಜಮಾ ಮಾಡಿದರು. ಹೀಗೆ ಹಣ ಜಮಾ ಮಾಡುತ್ತಾ ಹೋದ ಮಹಿಳೆಯ ಖಾತೆಯಿಂದ 3.11 ಲಕ್ಷ ರೂ. ವಂಚಕರ ಪಾಲಾಗಿದೆ. ಈ ಕೃತ್ಯವೆಸಗಿದ ವಂಚಕರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

- Advertisement -

Related news

error: Content is protected !!