
ವಿನೂತನ ಯುವಕ ಮಂಡಲ ಬೊಳಂತಿಮೊಗರು ಇದರ 20ನೇ ವರ್ಷಾಚರಣೆ ಸಂಭ್ರಮದ ಪ್ರಯುಕ್ತ, ಫೆ.19 ಶನಿವಾರದಂದು ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಬೊಳಂತಿಮೊಗರು ಶಾಲಾ ವಠಾರದಲ್ಲಿ ನಡೆಯಲಿದೆ.
ಬೆಳಿಗ್ಗೆ 8:00ಕ್ಕೆ ಗಣಪತಿ ಹೋಮ ನಡೆಯಲಿದೆ. ಬೆಳಿಗ್ಗೆ 9:00ಕ್ಕೆ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದ್ದು, ಇದರ ಉದ್ಘಾಟನೆಯನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಊರ ಪ್ರಮುಖರಾದ ರಾಘವ ಗೌಡ ಅಡ್ಡಾಳಿ ಹಾಗೂ ಪದ್ಮನಾಭ ಗೌಡ ಮಂಜಲಾಡಿ ಉಪಸ್ಥಿತರಿರುವರು.

ಸಂಜೆ 5:30ಕ್ಕೆ ಸಂಕಲ್ಪ ಶನೀಶ್ವರ ಪೂಜೆ ನಡೆಯಲಿದೆ. ಸಂಜೆ 6:30ಕ್ಕೆ ಪ್ರಸಾದ ವಿತರಣೆ, ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ನಡೆದು ಬಳಿಕ ರಾತ್ರಿ 8:00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 8:30ಕ್ಕೆ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ “ಶಿವದೂತೆ ಗುಳಿಗೆ” ವಿಭಿನ್ನ ಶೈಲಿಯ ತುಳು ನಾಟಕ ಪ್ರದರ್ಶನಗೊಳ್ಳಲಿದೆ.


ಈ ವೇಳೆ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ (ಆಧುನಿಕ ಭಾಗೀರಥ) ಇವರಿಗೆ ಸನ್ಮಾನ ನೆರವೇರಲಿದೆ. ನಿವೃತ್ತಿ ಹೊಂದಲಿರುವ ಶಿಕ್ಷಕ ಶ್ರೀ ಮಾಧವ ಕುದ್ರೆತ್ತಾಯರಿಗೆ ಗೌರವಾರ್ಪಣೆ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತಿ ಹೊಂದಿರುವ ನಮ್ಮೂರಿನ ಹೆಮ್ಮೆಯ ಯೋಧರಿಗೆ ಗೌರವಾರ್ಪಣೆ ಹಾಗೂ ಆಯ್ದ ಬಡ ಕುಟುಂಬಗಳಿಗೆ ಸಹಾಯ ಧನ ನೀಡಲಿದ್ದಾರೆ.

ಸಂಜೆ 7:00ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ (ಶ್ರೀ ಗುರುದೇವದತ್ತ ಸಂಸ್ಥಾನಮ್, ಶ್ರೀ ಕ್ಷೇತ್ರ ಒಡಿಯೂರು) ಯವರು ಆಶೀರ್ವಚನ ನೀಡಲಿದ್ದಾರೆ.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಸಂಜೀವ ಮಠಂದೂರು ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರು ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರು ಹರೀಶ್ ಪೂಂಜ, ರಘುವೀರ್ ಸೂಟರ್‌ಪೇಟೆ ಜಿಲ್ಲಾ ಯುವ ಅಧಿಕಾರಿ, ನೆಹರು ಯುವ ಕೇಂದ್ರ ಮಂಗಳೂರು, H.E. ನಾಗರಾಜ್ M.A. ಪೊಲೀಸ್ ನಿರೀಕ್ಷಕರು ವಿಟ್ಲ ಠಾಣೆ, ಅಶೋಕ್ ರೈ ಕೋಡಿಂಬಾಡಿ ರೈ ಎಸ್ಟೇಟ್ ಕೋಡಿಂಬಾಡಿ, ದಿವಾಕರ ದಾಸ್ ನೇರ್ಲಾಜೆ SLV ಬುಕ್ ಏಜೆನ್ಸಿಸ್ ಮೈಸೂರು, ಸದಾಶಿವ ಆಚಾರ್ಯ ಕೈಂತಿಲ ಶ್ರವಣ್ ಜ್ಯುವೆಲ್ಲರ್ ವಿಟ್ಲ,
ಯಾಸೀನ್ ಬೇಗ್ ಅನುಗ್ರಹ ಎಜುಕೇಶನ್ ಟ್ರಸ್ಟ್ ಕಲ್ಲಡ್ಕ, ಅರುಣ್ ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು, ಕರುಣಾಕರ ನಾಯ್ತೋಟ್ಟು ಸದಸ್ಯರು ಪಟ್ಟಣ ಪಂಚಾಯತ್ ವಿಟ್ಲ, ಅಬ್ದುಲ್ ರಹಿಮಾನ್ ಸದಸ್ಯರು ಪಟ್ಟಣ ಪಂಚಾಯತ್ ವಿಟ್ಲ, ಕಿಶೋರ್ ಆರ್ಲಪದವು ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು, ಮೌರಿಸ್ ವಿಟ್ಲ ಸಾಮಾಜಿಕ ಕಾರ್ಯಕರ್ತರು ವಿಟ್ಲ, ಸಂಜೀವ ನಾಯ್ಕ್ ಮುಖ್ಯ ಶಿಕ್ಷಕರು ಸ.ಹಿ.ಪ್ರಾ.ಶಾಲೆ ಬೊಳಂತಿಮೊಗರು ಭಾಗವಹಿಸಲಿದ್ದಾರೆ.











